Log In
BREAKING NEWS >
ಎಸ್‌ಪಿ ಬಾಲಸುಬ್ರಹ್ಮಣ್ಯಂ ನಿಧನ! ಶಾಶ್ವತವಾಗಿ ಹಾಡು ನಿಲ್ಲಿಸಿದ ಲೆಜೆಂಡರಿ ಗಾಯಕ!....ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ

ರಾಷ್ಟ್ರೀಯ ಮಹಿಳಾ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅಪಘಾತ: 6 ಸೈಕ್ಲಿಸ್ಟ್ ಗಳಿಗೆ ಗಾಯ

ವಿಜಯಪುರ: ಅಂತರ್ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಮಹಿಳಾ ಸೈಕ್ಲಿಂಗ್ ಕ್ರೀಡಾಕೂಟದ ಮೂರನೇ ದಿನವಾದ ಸೋಮವಾರ ಸ್ಪರ್ಧೆಯಲ್ಲಿ ಸೈಕಲ್ ಗಳ ನಡುವೆ ಢಿಕ್ಕಿಯಾಗಿ ಸಂಭವಿಸಿ 6 ಜನ ಕ್ರೀಡಾಪಟುಗಳು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಹಿಟ್ನಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಟೋಲ್ ನಾಕಾ ಬಳಿ ಮಾಸ್ ಸ್ಟಾಟ್ 50 ಕಿ.ಮೀ. ಸೈಕ್ಲಿಂಗ್‍ನಲ್ಲಿ ಸ್ಪರ್ಧೆಯ ಹಂತದಲ್ಲಿ ಕ್ರೀಡಾ ಪಟುಗಳು ವೇಗವಾಗಿ ಹೋಗುತ್ತಿದ್ದಾಗ, ಓರ್ವ ಸ್ಪರ್ಧಿಯ ಸೈಕಲ್ ಇನ್ನೋರ್ವ ಸ್ಪರ್ಧಿಯ ಸೈಕಲ್‍ಗೆ ತಾಗಿ, ನಿಯಂತ್ರಣ ಕಳೆದು ಕೆಳಗಿ ಬಿದ್ದಾದ್ದಾರೆ. ನಂತರ ಬಂದ ಸ್ಪರ್ಧಾಳುಗಳು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತು.

ಗಾಯಗೊಂಡ 6 ಸ್ಪರ್ಧಾಳುಗಳನ್ನು ಸ್ಥಳೀಯವಾಗಿ ಕರ್ತವ್ಯದಲ್ಲಿದ್ದ ಆಂಬ್ಯುಲೆನ್ಸ್ ನಲ್ಲಿ ತಕ್ಷಣ ಬಿ.ಎಲ್.ಡಿ.ಇ. ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅದೃಷ್ಟವಶಾತ್ ಯಾವುದೇ ಸ್ಪರ್ಧಿಗೆ ಗಂಭೀರ ಗಾಯಗಳಾಗಿಲ್ಲ, ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಉಪ ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ವಾರದ ತಿಳಿಸಿದ್ದಾರೆ.

ರಾಜಸ್ಥಾನ ಬಿಕಾನೇರ ಮಹಾರಾಜಾ ಗಂಜ ವಿಶ್ವವಿದ್ಯಾಲಯದ ಮುಸ್ಕಾನ್ ಹಾಗೂ ಕವಿತಾ, ಬೆಳಗಾವಿ ರಾಣಿ ಚನ್ನಮ್ಮ ವಿವಿಯ ದಾನೇಶ್ವರಿ ಪಾಯಣ್ಣವರ, ಪಂಜಾಬನ ಪಟಿಯಾಲ ವಿವಿಯ ಜಾಸ್ಮೀನ್ ಮತ್ತು ಅಮೃತಸರನ ಗುರುನಾನಕ ದೇವ ವಿವಿಯ ಮುಕುಲಾ, ಹರಿಯಾಣದ ಕುರುಕ್ಷೇತ್ರ ವಿವಿಯ ನಮೃತಾ ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಘಟನೆ ಬಳಿಕವೂ  ಮುಂದುವರೆದ ಸ್ಪರ್ಧೆಯಲ್ಲಿ ಪಂಜಾಬ ಪಟಿಯಾಲಾ ವಿವಿಯ ಬ್ರಿಸ್ಟಿ ಕಂಗಕೊನಾ ಪ್ರಥಮ, ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಸಾವಿತ್ರಿ ಹೆಬ್ಬಾಳಹಟ್ಟಿ ದ್ವಿತೀಯ ಹಾಗೂ ತೃತೀಯ ಮುಂಬೈನ ನಿತಿಬಾಯಿ ದಾಮೋದರ್ ಠಾಕರ್ಸಿ ವಿವಿಯ ರಂಜಿತಾ ಘೋರ್ಪಡೆ ತೃತೀಯ ಸ್ಥಾನ ಗಳಿಸಿದ್ದಾರೆ.

No Comments

Leave A Comment