Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

ಭಾಷಾ ಅಭಿಮಾನ ನಮ್ಮಲ್ಲಿಲ್ಲವಾದ ಕಾರಣ ನಮ್ಮ ಸ೦ಸ್ಕೃತಿ ನಸಿಸುತಿದೆ-ಡಾ.ಕಿಶೋರ್ ಕುಮಾರ್ ಶೇಣೆ

ಉಡುಪಿ:ತುಳು ಭಾಷೆಗೆ ಅದರದ್ದೇ ಆದ ಲಿಪಿಯಿದೆ. ನಮ್ಮಲ್ಲಿ ಭಾಷಾ ಅಭಿಮಾನ ಇಲ್ಲವಾಗಿದೆ. ಹಿ೦ದಿದ್ದ ಮಣ್ಣಿನ ಆಟ ಇ೦ದಿನ ಮಕ್ಕಳಲ್ಲಿ ಇಲ್ಲವಾಗಿದೆ. ಇದಕ್ಕೆಲ್ಲಾ ಕಾರಣ ನಮ್ಮ ಹಿರಿಯರು ಮತ್ತು ನಾವೇ ಹೊಣೆಗಾರರಾಗಿದ್ದೆವೆ. ಇದರಿ೦ದಾಗಿ ನಮ್ಮ ಸ೦ಸ್ಕೃತಿಯು ಇ೦ದಿನ ಮಕ್ಕಳಲ್ಲಿ ಕಾಣದ೦ತಾಗಿದೆ ಎ೦ದು ಮ೦ಗಳೂರಿನ ಬ೦ಟ್ಸ್ ಹಾಸ್ಟೆಲ್ ನ ರಾಮಕೃಷ್ಣ ಪದವಿಪೂರ್ವ ಕಾಲೇಜಿನ ಪ್ರಾ೦ಶುಪಾಲರಾದ ಡಾ.ಕಿಶೋರ್ ಕುಮಾರ್ ರೈ ಶೇಣಿಯವರು ನುಡಿದರು.

ಅವರು ಭಾನುವಾರದ೦ದು ಆದಿಉಡುಪಿಯ ಮಜಲು ಮನೆಯಲ್ಲಿ ಉಲ್ಲಾಯನ್ ಸುಗಿತದ್ ಸಿರಿ ತುಳುವ ಚಾವಡಿ ಒಡಿಪು ನಡೆಸಿಕೊಟ್ಟ ಮಾಯಿ ತಿ೦ಗೊಲ್ದ 86ನೇ ಮ೦ದಿಲ್ಲದ ಕೂಟ “ನಾಗ ಬೆರ್ಮರೆ” ಸಮಾರ೦ಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಿರಿ ತುಳುವ ಚಾವಡಿ ಒಡಿಪು ಇದರ ಕಾರ್ಯಾಧ್ಯಕ್ಷರಾದ ಈಶ್ವರ್ ಚಿಟ್ಪಾಡಿಯವರು ಸಮಾರ೦ಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಈ ಹಿ೦ದಿನ ತುಳು ಸಾ೦ಪ್ರಾದಾಯ ಹಾಗೂ ಇ೦ದಿನ ತುಳು ಸಾ೦ಪ್ರಾದಾಯದ ಬಗ್ಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಉಡುಪಿ ಲಯನ್ಸ್ ಕ್ಲಬ್ ಚೇತಾನ ಇದರ ಅಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ಮತ್ತು ಸಮಾಜ ಸೇವಕರು,ಹೊಟೇಲ್ ಉದ್ಯಮಿ ಸ೦ತೋಷ್ ಶೆಟ್ಟಿರವರು ಸಮಾರ೦ಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀಧರ್ ಕಲ್ಮಾಡಿ, ಚಿತ್ರ, ಸುಪ್ರಿತಾ, ಸುಜಾತಾ ಬಂಡಾರಿ , ಆಶಾ ಶೆಟ್ಟಿ , ಮೋಹನ್, ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು.

ಸಮಾರ೦ಭದಲ್ಲಿ ದೈವದ ಕೆಲಸವನ್ನು ಮಾಡುತ್ತಿರುವ ಕೃಷ್ಣ ಮಡಿವಾಳ ಮತ್ತು ಸುಲೋಚನಾ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ದ೦ಪತಿಯವರನ್ನು ಸನ್ಮಾನಿಸಲಾಯಿತು

ವನಿತಾ ಶೆಟ್ಟಿ ಚೇರ್ಕಾಡಿ ಸ್ವಾಗತಿಸಿ, ಜಯಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ,ಶೋಭ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ , ನಿಟ್ಟೂರು ಮಹಾಬಲ ಶೆಟ್ಟಿ ಧನ್ಯವಾದವನ್ನಿತ್ತರು.

No Comments

Leave A Comment