Log In
BREAKING NEWS >
ಎಸ್‌ಪಿ ಬಾಲಸುಬ್ರಹ್ಮಣ್ಯಂ ನಿಧನ! ಶಾಶ್ವತವಾಗಿ ಹಾಡು ನಿಲ್ಲಿಸಿದ ಲೆಜೆಂಡರಿ ಗಾಯಕ!....ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ

ಸ್ಟೀಯರಿಂಗ್ ತುಂಡಾಗಿ ಮರಕ್ಕೆ ಢಿಕ್ಕಿ ಹೊಡೆದ ಬಸ್: 25 ಜನರಿಗೆ ಗಾಯ, ಮೂವರು ಗಂಭೀರ

ಕಲಬುರಗಿ: ಮರಕ್ಕೆ ಸಾರಿಗೆ ಬಸ್ ಗುದ್ದಿದ ಪರಿಣಾಮ ಸುಮಾರು 25 ಜನರು ಗಾಯಗೊಂಡ ಘಟನೆ ರವಿವಾರ ಬೆಳಿಗ್ಗೆ ಜಿಲ್ಲೆಯ ಚಿಂಚೋಳಿ ಶುಗರ್ ಮಿಲ್ ಆ್ಯಂಡ್ ಬಯೋ ಇಂಡಸ್ಟ್ರೀಸ್‌ ಬಳಿ ನಡೆದಿದೆ.

ಚಿಂಚೋಳಿಯಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಹೊರಟಿದ್ದ ಬಸ್ ನ ಸ್ಟೀಯರಿಂಗ್ ತುಂಡಾದ್ದರಿಂದ ಈ ಅಪಘಾತ ಸಂಭವಿಸಿದೆ.‌ ಬಸ್ ಚಾಲಕ ಸೇರಿದಂತೆ 25 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು, ಒಟ್ಟು ಆರು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ನಿಲ್ದಾಣದಿಂದ ಹೊರಟ ಮೂರು ಕಿ.ಮೀ. ಅಂತರದಲ್ಲಿಯೇ ಈ ಅವಘಡ ಸಂಭವಿಸಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಸಬ್ ಇನಸ್ಪೆಕ್ಟರ್ ರಾಜಶೇಖರ ರಾಠೋಡ ಹಾಗೂ ಮೊದಲಾದವರು ಭೇಟಿ ನೀಡಿ, ಪರಿಶೀಲಿಸಿದರು. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment