Log In
BREAKING NEWS >
ಪರಿಸರಕ್ಕೆ ಕೋವಿಡ್ 19 ಉಪಕಾರ ; ಜಗತ್ತಿನಾದ್ಯಂತ ವಾಯುಮಾಲಿನ್ಯ ತೀವ್ರ ಇಳಿಕೆ.....ಕೋವಿಡ್-19: ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಏಪ್ರಿಲ್ 14ರವರೆಗೆ ನಿಷೇಧ...

ನಾಳೆ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ, ಏಪ್ರಿಲ್ 17 ಕ್ಕೆ ಮದುವೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಪುತ್ರ ಜೆಡಿಎಸ್ ರಾಜ್ಯ ಯುವಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರೇವತಿ ನಿಶ್ಚಿತಾರ್ಥ ನಾಳೆ ನಗರದ ತಾಜ್‌ವೆಸ್ಟ್‌ ಹೊಟೇಲ್‌ನಲ್ಲಿ ನೆರವೇರಲಿದೆ.

ನಿಶ್ಚಿತಾರ್ಥಕ್ಕೆ ಅಗತ್ಯವಾದ ಎಲ್ಲಾ ಸಿದ್ಧತೆಗಳು ಈಗಾಗಲೇ ತಾಜ್‌ವೆಸ್ಟ್‌ನಲ್ಲಿ ಭರದಿಂದ ಸಾಗಿವೆ. ನಾಳಿನ‌ ನಿಶ್ಚಿತಾರ್ಥಕ್ಕೆ ದೂರವಾಣಿ ಮುಖಾಂತರ ಗಣ್ಯರಿಗೆ ಪಕ್ಷದ ನಾಯಕರುಗಳಿಗೆ ಖುದ್ದು ಕರೆ ಮಾಡಿ ಆಹ್ವಾನ ನೀಡಿದ್ದಾರೆ.
ಜೆ.ಪಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಕುಮಾರಸ್ವಾಮಿ ಮಾತನಾಡಿ, ನಾಳೆ ನಮ್ಮ ಕುಟುಂಬದಲ್ಲಿ ಶುಭ ಸಮಾರಂಭ ಇದೆ. ಎಲ್ಲಾ ಪಕ್ಷದ ಶಾಸಕರು, ನಾಯಕರು, ಮುಖಂಡರು, ಪ್ರಮುಖ ಕಾರ್ಯಕರ್ತರಿಗೆ ಆಹ್ವಾನ ನೀಡಲಾಗಿದೆ. ಏಪ್ರಿಲ್ 17ರಂದು ವಿವಾಹಕ್ಕೆ ಮುಹೂರ್ತ ನಿಗದಿಪಡಿಸಲಾಗುವುದು. ನಿಶ್ಚಿತಾರ್ಥದ ಬಳಿಕ ಮದುವೆಯ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದರು.

ನಿಖಿಲ್-ರೇವತಿ ವಿವಾಹವನ್ನು ರಾಮನಗರ-ಚನ್ನಪಟ್ಟಣ ನಡುವಿನ ವಿಸ್ತಾರ ಪ್ರದೇಶದಲ್ಲಿ ಅದ್ಧೂರಿಯಾಗಿ ಮಾಡಲು ಸಿದ್ಧತೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಆಗಲಿದ್ದು, ಮದುವೆ ರಾಮನಗರದಲ್ಲಿ ನಡೆಯಲಿದೆ. ವಾಹನ ಪಾರ್ಕಿಂಗ್ ಹಾಗೂ ಊಟದ ವ್ಯವಸ್ಥೆಗೆ ಅಗತ್ಯವಾದ ಜಾಗವನ್ನೇ ಹುಡುಕಲಾಗುತ್ತಿದೆಯಂತೆ. ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಜನ್ಮ ನೀಡಿದ್ದು ರಾಮನಗರ ಕ್ಷೇತ್ರ. ಹಾಗಾಗಿ, ಅಲ್ಲಿಯೇ ಮದುವೆ ನಡೆಯಲಿದೆ. ‘ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ಜನರಿಗೆ ಊಟ ಹಾಕಿಸುವ ನಿರ್ಧಾರ ಮಾಡಿದ್ದೇನೆ. ಮಗನ ಮದುವೆಯಲ್ಲಿ ಊಟ ಹಾಕಿಸಿ ಅವರ ಋಣ ತೀರಿಸುತ್ತೇನೆ’ ಎಂದು ಕುಮಾರಸ್ವಾಮಿ ಅವರು ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು.

No Comments

Leave A Comment