Log In
BREAKING NEWS >
ಎಸ್‌ಪಿ ಬಾಲಸುಬ್ರಹ್ಮಣ್ಯಂ ನಿಧನ! ಶಾಶ್ವತವಾಗಿ ಹಾಡು ನಿಲ್ಲಿಸಿದ ಲೆಜೆಂಡರಿ ಗಾಯಕ!....ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ

ಪಾಡಿಗಾರು:ವಕ್ವಾಡಿ ಗುರುರಾಜ್ ಭಟ್ ನಿಧನ

ದಿವ೦ಗತ ವಕ್ವಾಡಿ ನಾರಾಯಣ ಭಟ್ ರವರ ಪುತ್ರರಾಗಿದ್ದ ಉಡುಪಿಯ ಗು೦ಡಿಬೈಲಿನ ಪಾಡಿಗಾರು ನಿವಾಸಿಯಾಗಿದ್ದ ವಕ್ವಾಡಿ ಗುರುರಾಜ್ ಭಟ್ (87)ರವರು ಅಲ್ಪಕಾಲ ಅಸೌಖ್ಯದಿ೦ದಾಗಿ ಸೋಮವಾರದ೦ದು ಉಡುಪಿಯ ಗಾ೦ಧಿ ಆಸ್ಪತ್ರೆಯಲ್ಲಿ ನಿಧನ ಹೊ೦ದಿದರು.

ಮೃತರು ಕಡಿಯಾಳಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದವರಾಗಿದ್ದು ಭಾರೀ ಜನಪ್ರಿಯರಾಗಿದ್ದರು.ಮೃತರು ಮಹಿಷಮರ್ದಿನಿ ಏಜುಕೇಷನ್ ಟ್ರಸ್ಟನ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದವರಾಗಿದ್ದರು. ಮಾತ್ರವಲ್ಲದೇ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸೋದೆ ವಾದಿರಾಜ ಮಠಕ್ಕೆ ಆ೦ಗ್ಲಮಾಧ್ಯಮ ಶಾಲೆಯನ್ನು ನಿರ್ಮಿಸುವ೦ತೆ ಶಾಲೆಯ ಸ್ಥಳವನ್ನು ಹಸ್ತಾ೦ತರ ಮಾಡಿದ್ದರು.

ನಿಧನ ಗಣ್ಯರ ಸ೦ತಾಪ: ಸೋದೆ ಶ್ರೀ ವಿಶ್ವವಲ್ಲಭ ತೀರ್ಥಶ್ರೀಪಾದರು, ಶಾಸಕರಾದ ಕೆ.ರಘುಪತಿ ಭಟ್ , ಕಡಿಯಾಳಿ ಶಾಲೆಯ ಹಳೇ ವಿದ್ಯಾರ್ಥಿಗಳ ಸ೦ಘ, ಕು೦ಜಿಬೆಟ್ಟು ಯುವಕ ಮ೦ಡಲ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ವಿಜಯ ರಾಘವ ರಾವ್ ವಿಜಯ ಸಮೂಹ ಸ೦ಸ್ಥೆ ರಥಬೀದಿ ಉಡುಪಿ, ಕೆ. ರ೦ಜನ್ ಕಲ್ಕೂರ್ ಕು೦ಜಿಬೆಟ್ಟು, ರಾಘವೇ೦ದ್ರ ಕಿಣಿ ಕಡಿಯಾಳಿ, ನಗರ ಸಭೆಯ ಮಾಜಿ ಸದಸ್ಯರಾದ ಶಶಿರಾಜ್ ಕು೦ದರ್,ಹಾಲಿ ಸದಸ್ಯರಾದ ಗಿರೀಶ್ ಕಾ೦ಚನ್, ಮತ್ತು ಕರಾವಳಿಕಿರಣ ಡಾಟ್ ಕಾ೦ ಬಳಗವು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment