Log In
BREAKING NEWS >
ಎಸ್‌ಪಿ ಬಾಲಸುಬ್ರಹ್ಮಣ್ಯಂ ನಿಧನ! ಶಾಶ್ವತವಾಗಿ ಹಾಡು ನಿಲ್ಲಿಸಿದ ಲೆಜೆಂಡರಿ ಗಾಯಕ!....ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ

ಫೆ.7,8ರಂದು ಉಡುಪಿಯಲ್ಲಿ ಬ್ರಹ್ಮಾಕುಮಾರಿ ಶಿವಾನಿಯವರಿ೦ದ ಆಧ್ಯಾತ್ಮಿಕ ಪ್ರವಚನ

ಉಡುಪಿ:ಅಂತರಾಷ್ಟ್ರೀಯ ಖ್ಯಾತಿ ವೆತ್ತ ಬ್ರಹ್ಮಾಕುಮಾರಿ ಶಿವಾನಿ ಇವರ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವು ಇದೇ ತಿ೦ಗಳ
ಫೆ.7 ಮತ್ತು 8 ರಂದು ಉಡುಪಿಯ ಎಂಜಿಎಂ ಕಾಲೇಜಿನ ಎಎಲ್‍ಎನ್‍ರಾವ್‍ಗ್ರೌಂಡ್‍ನಲ್ಲಿ ನಡೆಯಲಿದೆ.

“ಅವೇಕನಿಂಗ್ ವಿದ್ ಬ್ರಹ್ಮಾಕುಮಾರೀಸ್” ವಾಹಿನಿಯಲ್ಲಿ ಬಿ.ಕೆ.ಶಿವಾನಿ ಇವರ 2,000ಕ್ಕೂ ಹೆಚ್ಚಿನ ಸಂಚಿಕೆಗಳನ್ನೊಳಗೊಂಡ ಉಪನ್ಯಾಸಕ ಮಾಲಿಕೆಯನ್ನು ಪ್ರಸಾರ ಮಾಡಿದಾಗ ಒಂದು ದಶಕಕ್ಕೂಅಧಿಕ ಸಮಯದಲ್ಲಿ ಭಾರತ, ಅಮೇರಿಕ, ಕೆನಡಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯ, ನ್ಯೂಜಿಲೆಂಡ್ ಮುಂತಾದ ದೇಶ-ವಿದೇಶಗಳಲ್ಲಿನ ವೀಕ್ಷಕರು‘ಸ್ವಯಂ ಪರಿವರ್ತನೆ’, ‘ಒತ್ತಡ ಮುಕ್ತ ಜೀವನ’ ಇತ್ಯಾದಿ ವಿಷಯಗಳ ಬಗೆಗಿನ ಭಾಷಣಗಳಿಗೆ ಆಕರ್ಷಿತರಾಗಿತಮ್ಮಲ್ಲಿನ ಮಾನಸಿಕ ಒತ್ತಡ, ಖಿನ್ನತೆ, ವ್ಯಸನ, ಹೀನ ಸ್ವಾಭಿಮಾನ, ಅತೃಪ್ತಿ ಸಂಬಂಧ ಮುಂತಾದ ನಕಾರಾತ್ಮಕತೆಗಳಿಂದ ಹೊರಬರಲು ಸಾಧ್ಯವಾಯಿತು.
ಶಿವಾನಿಯವರನ್ನು 2017ರಿಂದಲೂ ‘ಸದ್ಭಾವನಾರಾಯಭಾರಿ’ಯನ್ನಾಗಿ ವಿಶ್ವ ಮನೋವ್ಯೆದ್ಯಕೀಯ ಸಂಘವು ನೇಮಕ ಮಾಡಿದೆ. 2014ರಲ್ಲಿ ಮಹಿಳೆಯರದಶಕದ ಸಾಧಕರ ಪ್ರಶಸ್ತಿಯನ್ನು ಅಸ್ಸೋಚಮ್ ಲೇಡೀಸ್ ಲೀಗ್‍ನೀಡಿ, ಸನ್ಮಾನಿಸಿದೆ.

ಇನ್ನೂ ಅನೇಕಾನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಇವರು ಫೆ. 7ರ ಶುಕ್ರವಾರ ಸಂಜೆ 5.30 ರಿಂದ 7.30ರ ವರೆಗೆ‘ದ ಕೀ ಟುಯುವರ್ ಹ್ಯಾಪಿ ಹೋಂ’ ಎಂಬ ವಿಷಯದ ಬಗ್ಗೆ ಉಡುಪಿಯ ಎಂಜಿಎಂ ಕಾಲೇಜಿನ ಎಎಲ್‍ಎ ನ್‍ರಾ ವ್‍ಗ್ರೌಂಡ್‍ನಲ್ಲಿ ಮಾತನಾಡಲಿದ್ದಾರೆ.

ಮಾನವೀಯ ಸಂಬಂಧಗಳಲ್ಲಿ ಸಾಮರಸ್ಯವಿಲ್ಲದೆ, ಏಕಾಂಗಿತನ ದಿಂದ ರೋಸಿ ಹೋಗಿ,ಯಂತ್ರಗಳೊಂದಿಗೆ ಹೆಚ್ಚೆಚ್ಚುಸಂಬಂಧಗಳನ್ನು ಬೆಸೆದುಕೊಂಡಿರುವುದನ್ನು ನಾವು ಕಾಣುತ್ತಿದ್ದೇವೆ. ಮನೆಯಲ್ಲಿನ ಸದಸ್ಯರಿಗಿಂತಲೂಯಂತ್ರ ಸಂಬಂಧಗಾಢವಾಗಿದೆ. ಇಂತಹ ಉಸಿರುಗಟ್ಟುವ ವಾತಾವರಣದಿಂದ ಹೊರಬಂದುಮತ್ತೆಮೊದಲಿನಂತೆ ಮಾನವೀಯ ಸಂಬಂಧಗಳನ್ನು ಹೊಂದುವುದು ಹೇಗೆ, ಸಮರಸವೇಜೀವನಎಂಬುದರ ಬಗ್ಗೆಮಾತನಾಡಲಿರುವರು.

ಫೆ.8ರ ಬೆಳಿಗ್ಗೆ 6.30ರಿಂದ 8.00ರ ವರೆಗೆ‘ಇಮೋಷನಲ್ ಫಿಟ್ನೆಸ್‍ಥ್ರೂ ಮೆಡಿಟೇಷನ್’ ಎಂಬ ವಿಷಯದ ಬಗ್ಗೆಯೂ ಉಡುಪಿಯಎಂಜಿಎಂ ಕಾಲೇಜಿನ ಎಎಲ್‍ಎನ್‍ರಾವ್‍ಗ್ರೌಂಡ್ ನಲ್ಲಿ ಮತ್ತೊಂದು ಪ್ರವಚನ ನೀಡಲಿದ್ದಾರೆ. ಪ್ರಸಕ್ತ ಸಮಯದಲ್ಲಿ ಮನುಷ್ಯರೆಲ್ಲರೂ ಬಹುತೇಕದೈಹಿಕ ಫಿಟ್ನೆಸ್ ಹೊಂದಲು ಸಾಕಷ್ಟು ಕಸರತ್ತು, ದೇಹದಂಡನೆ ಮೂಲಕವಾಗಿ ಪ್ರಯತ್ನಿಸುತ್ತಿರುವುದನ್ನು ನಾವು ಕಾಣಬಹುದು. ಹಾಗೆ ನೋಡುವುದಾದರೆದೈಹಿಕ ಫಿಟ್ನೆಸ್‍ನೊಂದಿಗೆ ಭಾವನಾತ್ಮಕ ಫಿಟ್ನೆಸ್ ಸಹ ಅಷ್ಟೇ ಮುಖ್ಯ.ಆಂತರಿಕ ಫಿಟ್ನೆಸ್‍ಇಲ್ಲವಾದಲ್ಲಿಜೀವನವೇ ಶೂನ್ಯವಾಗಿ ಬಿಡುವುದರಲ್ಲಿ ಸಂಶಯವಿಲ್ಲ. ಈ ಮನೋಬಲ ಹೆಚ್ಚಿಸಿಕೊಳ್ಳಲುಧ್ಯಾನವು ಹೇಗೆ ಸಹಕಾರಿಯಾಗಲಿರುವುದುಎಂಬುದರ ಬಗ್ಗೆ ವ್ಯಾವಹಾರಿಕವಾದಜೀವಂತ ಉದಾಹರಣೆಗಳನ್ನು ನೀಡಿ, ನೀರೂಪಿಸಿ ಮನದಟ್ಟು ಮಾಡಿಕೊಡಲಿದ್ದಾರೆ. ಸಾರ್ವಜನಿಕರುಇವೆರಡೂ ಪ್ರವಚನಗಳ ಲಾಭ ಪಡೆಯಬೇಕಾಗಿ ಬ್ರಹ್ಮಾಕುಮಾರಿಈಶ್ವರೀಯ ವಿಶ್ವ ವಿದ್ಯಾಲಯ, ಮಣಿಪಾಲ ಶಾಖೆಯ ಸಂಚಾಲಕರಾದಬಿ.ಕೆ ಸೌರಭಇವರು ವಿನಂತಿಸಿಕೊಂಡಿದ್ದಾರೆ.

ಇದಲ್ಲದೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬಿ.ಕೆ.ಶಿವಾನಿಯವರು ‘ಟ್ರಾನ್ಸ್‍ಫರ್ಮ್ ವರ್ಕ್ ಪ್ರೆಷರ್‍ಟು ವರ್ಕ್ ವಿದ್ ಪ್ಲೆಷರ್’ ಎಂಬ ವಿಷಯದ ಬಗ್ಗೆಯೂ ಸರ್ಕಾರಿಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗಾಗಿ ಸಂವಾದಾತ್ಮಕ ಪ್ರವಚನವನ್ನು ಫೆ.7ರಂದು ಬೆಳಿಗ್ಗೆ ‘ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ’, ರಜತಾದ್ರಿ, ಮಣಿಪಾಲದಲ್ಲಿ ನಡೆಸಿಕೊಡಲಿದ್ದಾರೆ.

ಮುಖ್ಯವಾಗಿ ಫೆ.7ರ ಸಂಜೆ ಹಾಗೂ ಫೆ.8ರ ಬೆಳಗ್ಗಿನ ಸಾರ್ವಜನಿಕ ಕಾರ್ಯಕ್ರಮಗಳೆರಡರಲ್ಲಿಯೂ ಇವರುಪ್ರವಚನ ನೀಡುವುದರಿಂದ ನಗರದ ಸಮಸ್ತ ನಾಗರಿಕರೆಲ್ಲರಿಗೂ ಮುಕ್ತ ಪ್ರವೇಶವಿದೆ.

No Comments

Leave A Comment