Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಮಂಗಳೂರು ನಗರದ ಪಂಪ್ ವೆಲ್ ಮೇಲ್ಸೇತುವೆ ಲೋಕಾರ್ಪಣೆ

ಮಂಗಳೂರು: ಮಂಗಳೂರು ನಗರದ ದೀರ್ಘಕಾಲದಿಂದ ಬಾಕಿ ಉಳಿದುಕೊಂಡಿದ್ದ ಪಂಪ್ ವೆಲ್ ಮೇಲ್ಸೇತುವೆಯನ್ನು ಜಿಲ್ಲಾಉಸ್ತುವಾರಿ ಸಚಿವ ಕೊಟಾ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶುಕ್ರವಾರ ಉದ್ಘಾಟಿಸಿದರು.

ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಹುತೇಕ 10 ವರ್ಷಗಳ ವಿಳಂಬ, ಒಂದರ ನಂತರ ಒಂದರಂತೆ ಹಲವು ಅಂತಿಮ ಗಡುವುಗಳು ಮುಗಿದ ನಂತರ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ- ಕುಂದಾಪುರ ನಡುವಣ ನಾಲ್ಕು ಪಥ ಮಾರ್ಗದ ಭಾಗವಾಗಿ ಪಂಪ್ ವೆಲ್ ಮೇಲ್ಸೇತುವೆ ಕೊನೆಗೆ ಇಂದು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಂಡಿತು.

ನಂತೂರು- ಎನ್ ಐ ಟಿ ಕೆ ಸರತ್ಕಲ್ ಮಾರ್ಗ ಹೊರತುಪಡಿಸಿ, ರಾಷ್ಟ್ರೀಯ ಹೆದ್ದಾರಿ 66 ತಲಪಾಡಿ- ಕುಂದಾಪುರ ನಡುವಣ ನಾಲ್ಕುಪಥ ಮಾರ್ಗದ ಕಾಮಗಾರಿ 2010 ಸೆಪ್ಟಂಬರ್ ನಲ್ಲಿ ಆರಂಭಗೊಂಡಿತ್ತು, ಪಂಪ್ ವೆಲ್ (ಮಹಾ ವೀರ ಸರ್ಕಲ್) ಮೇಲ್ಸೇತುವೆ ಈ ಯೋಜನೆಯ ಭಾಗವಾಗಿತ್ತು.

No Comments

Leave A Comment