Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ರಣಜಿ: ರಲ್ವೇಸ್ ವಿರುದ್ಧ ಕರ್ನಾಟಕಕ್ಕೆ 10 ವಿಕೆಟ್ ಭರ್ಜರಿ ಜಯ!

ನವದೆಹಲಿ: ದೆಹಲಿಯಲ್ಲಿ ಗುರುವಾರ ನಡೆದ ರಣಜಿ ಟ್ರೋಫಿ ಗ್ರೂಪ್ ಬಿ ಪಂದ್ಯದಲ್ಲಿ ಮಧ್ಯಮ ವೇಗಿರೋನಿತ್ ಮೋರೆ  (6/32) , ಅಭಿಮನ್ಯು ಮಿಥುನ್ ಮಾರಕ ದಾಳಿ ನೆರವಿನಿಂದ ಕರ್ನಾಟಕ ತಂಡ ರೈಲ್ವೆಸ್ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿದೆ.

ರೈಲ್ವೇಸ್ ನ ಮೊದಲ ಇನ್ನಿಂಗ್ಸ್ ನಲ್ಲಿ ಅಭಿಮನ್ಯು 4 ವಿಕೆಟ್ ಕಿತ್ತರೆ ದ್ವಿತೀಯ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಕಬಳಿಸಿದ್ದಾರೆ.ಇನ್ನು ರೋಈಹಿತ್ ಮೋರೆ ಎರಡೂ ಇನ್ನಿಂಗ್ಸ್ ಗಳಲ್ಲಿ ಒಟ್ತಾರೆ ಏಳು ವಿಕೆಟ್ ಪಡೆದು ಮಿಂಚಿದ್ದಾರೆ.

ಈ ಜಯದೊಡನೆ ಕರ್ನಾಟಕಕ್ಕೆ 7 ಅಂಕಗಳು ದೊರಕಿದ್ದು ಒಟ್ಟೂ 24 ಅಂಕಗಳೊಡನೆ ಎ ಹಾಗೂ ಬಿ ಗುಂಪಿನಲ್ಲಿ 4ನೇ ಸ್ಥಾನದಲ್ಲಿದೆ.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ರೈಲ್ವೇಸ್ ಪರ ನಾಯಕ ಅರಿಂದಮ್ ಘೋಷ್ (59) ವಿನಾಶ್ ಯಾದವ್ (63)ಕಲೆಹಾಕುವುದರೊಡನೆ ತಂಡವನ್ನು 182 ರನ್ ತಲುಪಲು ನೆರವಾಗಿದ್ದರು.ಆದರೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೃಣಾಲ್ ದೇವಧರ್ 38 ರನ್ ಗಳಿಸಿದ್ದಷ್ಟೇ ಉತ್ತಮ ಮೊತ್ತವಾಗಿತ್ತು. ಅಲ್ಲದೆ ಆ ನ್=ಇನ್ನಿಂಗ್ಸ್ ನಲ್ಲಿ ರಲ್ವೇಸ್ ಒಟ್ಟಾರೆ ಕಲೆಹಾಕಿದ್ದು ಕೇವಲ 79 ರನ್ ಗಳನ್ನು ಮಾತ್ರ.

ರೈಲ್ವೇಸ್ ನೀಡಿದ್ದ ಗುರಿ ಬೆನ್ನತ್ತಿದ ಕರ್ನಾಟಕ ತಂಡ, ಮೊದಲ ಇನ್ನಿಂಗ್ಸ್‌ನಲ್ಲಿ ದೇವದತ್ ಪಡಿಕ್ಕಲ್ (55), ಶ್ರೀನಿವಾಸ್ ಶರತ್ (62) ರನ್ ಗಳಿಕೆಯ ಸಹಾಯದಿಂದ 211 ರನ್ ಗಳಿಸಿದ್ದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿ ಜಯದ ಮಾಲೆ ಕೊರಳೀಗೆ ಹಾಕಿಕೊಂಡಿತ್ತು.

No Comments

Leave A Comment