Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ನಿಖಿಲ್‍ಗೆ ಇಂದು ಡಬಲ್ ಸಂಭ್ರಮ – ಫೆ.10ಕ್ಕೆ ಜಾಗ್ವಾರ್‌ನ ನಿಶ್ಚಿತಾರ್ಥ

ಬೆಂಗಳೂರು: ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇಂದು ನಿಖಿಲ್‍ಗೆ ಡಬಲ್ ಸಂಭ್ರಮದ ದಿನವಾಗಿದೆ. ಒಂದುಕಡೆ ತಮ್ಮ ನಾಲ್ಕನೇ ಸಿನಿಮಾದ ಮಹೂರ್ತ ಸಮಾರಂಭ ನೆರವೇರಿದೆ. ಮತ್ತೊಂದು ಕಡೆ ನಿಶ್ವಿತಾರ್ಥದ ದಿನ ಕೂಡ ಫಿಕ್ಸ್ ಆಗಿದೆ.

ಹೌದು. ನಿಖಿಲ್ ಕುಮಾರಸ್ವಾಮಿ ಅವರ ನಾಲ್ಕನೇ ಸಿನಿಮಾದ ಮಹೂರ್ತ ಬಸವನಗುಡಿಯ ಕಾರಂಜಿ ಆಂಜನೇಯನ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಟಾಲಿವುಡ್‍ನ ವಿಜಯ್‍ಕುಮಾರ್ ಕೊಂಡ ನಿರ್ದೇಶನದಲ್ಲಿ ನಿಖಿಲ್ ಅಭಿನಯಿಸುತ್ತಿದ್ದು, ಲಹರಿ ಸಂಸ್ಥೆಯ ನಿರ್ಮಾಣದಲ್ಲಿ ಚಿತ್ರ ಮೂಡಿ ಬರುತ್ತಿದೆ. ಇನ್ನೂ ಹೆಸರಿಡದ ಚಿತ್ರದಲ್ಲಿ ನಿಖಿಲ್ ಜೊತೆ ಇಬ್ಬರು ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ.

ಇತ್ತ ಇಂದು ನಿಖಿಲ್ ಮನೆಗೆ ರೇವತಿ ಕುಟುಂಬದವರು ಭೇಟಿ ನೀಡಿದ್ದಾರೆ. ಇತ್ತೀಚೆಗಷ್ಟೆ ರೇವತಿ ಮನೆಗೆ ನಿಖಿಲ್ ಕುಟುಂಬ ಭೇಟಿ ನೀಡಿ ಶಾಸ್ತ್ರ ಮುಗಿಸಿದ್ದರು. ಇವತ್ತು ನಿಖಿಲ್ ಮನೆಗೆ ಶಾಸಕ ಕೃಷ್ಣಪ್ಪ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿ ಶಾಸ್ತ್ರವನ್ನು ಮುಗಿಸಿದ್ದಾರೆ. ಎರಡು ಕುಟುಂಬದವರು ಮಾತುಕತೆ ಮುಗಿಸಿ ಮುಂದಿನ ತಿಂಗಳು ಫೆಬ್ರುವರಿ 10ಕ್ಕೆ ನಿಖಿಲ್ ಮತ್ತು ರೇವತಿ ಅವರ ನಿಶ್ಚಿತಾರ್ಥವನ್ನು ನಿಗದಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಎರಡು ಕುಟುಂಬಗಳ ಆಪ್ತರು ಭಾಗಿಯಾಗಿದ್ದರು. ಫೆಬ್ರುವರಿ 10 ರಂದು ನಿಶ್ಚಿತಾರ್ಥ ನಡೆಯಲಿದೆ. ಉಳಿದಂತೆ ಮದುವೆ ಸಮಾರಂಭ ಏಪ್ರಿಲ್ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಹೇಳಿದರು.

No Comments

Leave A Comment