Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಪಾಕಿಸ್ತಾನ: ವಿವಾಹ ಮಂಟಪದಿಂದಲೇ ಹಿಂದೂ ಯುವತಿಯನ್ನು ಅಪಹರಿಸಿದ ಮುಸ್ಲಿಂ ಯುವಕ!

ಇಸ್ಲಾಮಾಬಾದ್: ಮದುವೆ ಮನೆಯಿಂದಲೇ ಹಿಂದೂ ಯುವತಿಯನ್ನು ಅಪಹರಿಸಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮಾಟಿಯಾರಿ ಜಿಲ್ಲೆಯಲ್ಲಿ ನಡೆದಿದ್ದು, 24ವರ್ಷದ ಹಿಂದು ಯುವತಿ ಅಪಹರಣಕ್ಕೊಳಗಾಗಿದ್ದು, ಆಕೆಯನ್ನು ಇಸ್ಲಾಂಗೆ ಮತಾಂತರಿಸಿ ಮುಸ್ಲಿಂ ಯುವಕನೊಬ್ಬ ವಿವಾಹವಾಗಿರುವುದಾಗಿ ವರದಿ ತಿಳಿಸಿದೆ.

ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಯುವತಿಯರು, ಮಹಿಳೆಯರ ಅಪಹರಣ ಮತ್ತು ಮತಾಂತರ ದೊಡ್ಡ ಪಿಡುಗಾಗಿದೆ ಎಂದು ವರದಿ ವಿವರಿಸಿದೆ. ಕರಾಚಿಯಿಂದ 215 ಕಿಲೋ ಮೀಟರ್ ದೂರದಲ್ಲಿರುವ ಮಾಟಿಯಾರಿ ಜಿಲ್ಲೆಯ ಹಾಲಾ ನಗರದಲ್ಲಿ ಹಿಂದೂ ಯುವತಿಯನ್ನು ಮದುವೆ ಮಂಟಪದಿಂದಲೇ ಅಪಹರಿಸಿಲಾಗಿತ್ತು ಎಂದು ವರದಿ ಹೇಳಿದೆ.

ಹಾಲಾ ನಗರದಲ್ಲಿ ಮಗಳ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಶಾರುಖ್ ಗುಲ್ ಎಂಬಾತ ಹಲವಾರು ವ್ಯಕ್ತಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಬಂದು ಮಗಳನ್ನು ಹಾಡಹಗಲೇ ಅಪಹರಿಸಿಕೊಂಡು ಹೋಗಿರುವುದಾಗಿ ಯುವತಿಯ ತಂದೆ ಕಿಶೋರ್ ದಾಸ್ ಆರೋಪಿಸಿದ್ದಾರೆ.

ಕಳೆದ ಹದಿನೈದು ದಿನಗಳಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಜನವರಿ 15ರಂದು 15 ವರ್ಷದ ಹಿಂದೂ ಬಾಲಕಿಯನ್ನು ಜಾಕೋಬಾಬಾದ್ ಜಿಲ್ಲೆಯಲ್ಲಿ ಅಪಹರಿಸಿದ್ದ ಘಟನೆ ನಡೆದಿತ್ತು. ಬಳಿಕ ಆಕೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿತ್ತು ಎಂದು ಪಿಟಿಐ ವರದಿ ಮಾಡಿದೆ. ಇಸ್ಲಾಂಗೆ ಮತಾಂತರಗೊಳಿಸಿ ಅಲಿ ರಾಝಾ ಸೋಳಂಗಿ ಎಂಬ ಮುಸ್ಲಿಂ ವ್ಯಕ್ತಿ ಜತೆ ವಿವಾಹ ನೆರವೇರಿಸಲಾಗಿತ್ತು ಎಂದು ವರದಿ ವಿವರಿಸಿದೆ.

No Comments

Leave A Comment