Log In
BREAKING NEWS >
ಎಸ್‌ಪಿ ಬಾಲಸುಬ್ರಹ್ಮಣ್ಯಂ ನಿಧನ! ಶಾಶ್ವತವಾಗಿ ಹಾಡು ನಿಲ್ಲಿಸಿದ ಲೆಜೆಂಡರಿ ಗಾಯಕ!....ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ

“ದಿಲ್ ತೋ ಹ್ಯಾಪಿ ಹೈ ಜೀ ಶೋ”ನ ನಟಿ ಸೇಜಲ್ ಆತ್ಮಹತ್ಯೆಗೆ ಶರಣು

ಮುಂಬೈ: ಸಿಮ್ಮಿ ಖೋಸ್ಲಾ ಅವರ “ದಿಲ್ ತೋ ಹ್ಯಾಪಿ ಹೈ ಜೀ” ಸೀರಿಯಲ್ ನ ನಟಿ ಸೇಜಲ್ ಶರ್ಮಾ ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿ ತಿಳಿಸಿದೆ.

ನಟಿ ಸೇಜಲ್ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದರು ಎಂಬ ವಿವರ ಲಭ್ಯವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಹನಟ ಅರು ಕೆ ವರ್ಮಾ ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಸೇಜಲ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನಂಬಲೂ ಸಾಧ್ಯವಾಗುತ್ತಿಲ್ಲ. ಹತ್ತು ದಿನಗಳ ಹಿಂದೆ ನಾನು ಆಕೆಯನ್ನು ಭೇಟಿಯಾಗಿದ್ದೆ. ಆಗ ಖುಷಿಯಲ್ಲೇ ಇದ್ದಿರುವುದಾಗಿ ತಿಳಿಸಿರುವುದಾಗಿ ವರದಿ ವಿವರಿಸಿದೆ.

ದಿಲ್ ತೋ ಹ್ಯಾಪಿ ಹೈ ಜೀ ಸೀರಿಯಲ್ ನಲ್ಲಿ ವರ್ಮಾ ಸೇಜಲ್ ಸಹೋದರನ ಪಾತ್ರ ನಿರ್ವಹಿಸುತ್ತಿದ್ದಾರೆ. ಶುಕ್ರವಾರ ಆಕೆ ನೇಣಿಗೆ ಶರಣಾಗಿದ್ದರು ಎಂಬ ಸುದ್ದಿ ಆಕೆಯ ಮನೆಯವರಿಗೆ ಇಂದು ಬೆಳಗ್ಗೆ ಗಮನಕ್ಕೆ ಬಂದಿತ್ತು. ಇದೀಗ ಸೇಜಲ್ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ನಡೆಸಲು ಉದಯ್ ಪುರ್ ಗೆ ಕೊಂಡೊಯ್ಯುತ್ತಿದ್ದಾರೆ ಎಂದು ವರ್ಮಾ ತಿಳಿಸಿದ್ದಾರೆ.

ಸೇಜಲ್ ಶರ್ಮಾ ಉದಯ್ ಪುರ್ ನಿಂದ 2017ರಲ್ಲಿ ಮುಂಬೈಗೆ ನಟಿಯಾಗುವ ಕನಸು ಹೊತ್ತು ಬಂದಿದ್ದರು. ನಂತರ ಸ್ಟಾರ್ ಪ್ಲಸ್ ನ ದಿಲ್ ತೋ ಹ್ಯಾಪಿ ಹೈ ಜೀ ಶೋನಲ್ಲಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು ಎಂದು ವರದಿ ತಿಳಿಸಿದೆ.

No Comments

Leave A Comment