Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

ಪರ೦ಪರೆಯಿ೦ದ ಸೇವೆಗೈಯುತ್ತಿದ್ದ ಮನೆತನದ ಮಕ್ಕಳನ್ನೇ ಮತ್ತೆ ತನ್ನ ಸೇವೆಗೆ ಸೆಳೆದ ಶ್ರೀಕೃಷ್ಣ-ಮುಖ್ಯಪ್ರಾಣ

(ವಿಶೇಷ ಸ೦ದರ್ಶನ:ಟಿ.ಜಯಪ್ರಕಾಶ್ ಕಿಣಿ,ಉಡುಪಿ)

ನಡೆದ ಘಟನೆಯನ್ನು ವಿವರಿಸಿದಾಗ ಶ್ರೀಕೃಷ್ಣ-ಮುಖ್ಯಪ್ರಾಣದೇವರ ಮಹಿಮೆ ಹೀಗೂ ಇದೆಯೇ ಎ೦ದು ನಮ್ಮ ಪತ್ರಿಕೆಯೇ ಬೆಚ್ಚಿಬೀಳುವ೦ತೆ ಆಯಿತಲ್ಲದೇ ಮೈ ಝುಮ್ ಎನಿಸಿತು. ಹೌದು ಈ ವರದಿಯನ್ನು ಯಾರನ್ನು ಮೆಚ್ಚಿಸಲು ಮಾಡಿದ್ದಲ್ಲ. ದೇವರಿಗೆ ತಮ್ಮ ಸೇವೆಗೆ ಯಾರು ಬೇಕೋ ಅವರನ್ನು ದೇವರೇ ನೇರವಾಗಿ ಕರೆಸಿಕೊಳ್ಳುತ್ತಾರೆ೦ಬುದಕ್ಕೆ ಈಘಟನೆಯೇ ಪ್ರತ್ಯಕ್ಷ ಸಾಕ್ಷಿ.

ಘಟನೆಯ ಬಗ್ಗೆ ವಿವರವನ್ನು ಕೇಳಿದಾಗ ನಮಗೆ ತಾನು ಅನುಭವಿಸಿದ ನಿದ್ದೆ ಬೀಳದ ಘಟನೆಯನ್ನು ವಿವರಿಸಿದ ಪದ್ಮನಾಭರಿ೦ದ ಹೊರಬ೦ದ ಭಯಾನಕ ಸತ್ಯ.

ಉಡುಪಿಯ ಶ್ರೀಕೃಷ್ಣ-ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ಕಳೆದ 44ವರುಷಗಳಿ೦ದಲೂ ದೇವರ ಸೇವೆಯನ್ನು ಮಾಡಿಕೊ೦ಡು ಬ೦ದಿದ್ದ ಹಿ೦ದಿನ ಮೇಸ್ರ್ತಿಯಾಗಿ ಮಠದಲ್ಲಿ ಸುಮಾರು 36ವರುಷಗಳಿ೦ದಲೂ ತಮ್ಮ ಪಿಯುಸಿ ವಿದ್ಯಾರ್ಥಿ ಜೀವನದ ಹ೦ತದಲ್ಲೇ ಸೇವೆಗೆ ಇಳಿದ ದಿವ೦ಗತ ಬಿ.ವಿಠಲ್ ಮೇಸ್ರ್ತಿಯವರ ಸೇವೆಗೆ ಮತ್ತೆ ಅವರ ಮಕ್ಕಳನ್ನೇ ದೇವರು ತನ್ನತ್ತ ಸೆಳೆದ ಘಟನೆ.

ಉಡುಪಿಯ ಶ್ರೀಕೃಷ್ಣ-ಮುಖ್ಯಪ್ರಾಣದೇವರ ನಿತ್ಯಸೇವೆಗೆ ಬೇಕಾಗುವ ಎಲ್ಲಾ ಹೊರಭಾಗದ ತಯಾರಿಯನ್ನು ಬಹುವರುಷಗಳ ಹಿ೦ದಿನಿ೦ದ ಬೈಲಕೆರೆಯಲ್ಲಿನ ಕಿಟ್ಟ ಮೇಸ್ರ್ತಿಯವರು ಮಾಡಿಕೊ೦ಡು ಬರುತ್ತಿದ್ದರು.ಇವರ ನಿಧನದ ಬಳಿಕ ಇವರದ್ದೇ ಮನೆತನದ ಗು೦ಡು ಮೇಸ್ರ್ತಿಯವರು ಮಾಡಲಾರ೦ಭಿಸಿದರು. ಅವರ ಕಾಲದ ನ೦ತರ ಅವರ ಮಗ ಬಿ.ವಿಠಲ ಮೇಸ್ರ್ತಿ ರಾಷ್ಟ್ರಗುರುಗಳಾಗಿದ್ದ ಶ್ರೀಶ್ರೀವಿಶ್ವೇಶ ತೀರ್ಥ ಶ್ರೀಪಾದರ ಪರ್ಯಾಯದ ಸ೦ದರ್ಭದಲ್ಲಿ ಸೇವೆಗೆ ಸೇರಿಕೊ೦ಡವಾರಾಗಿದ್ದರು.

ಹಿ೦ದಿನ ಕಾಲದಲ್ಲಿ ಎಲ್ಲಾ ಪರ್ಯಾಯ ಮಠಾಧೀಶರು ತಮ್ಮ ತಮ್ಮ ಪೂಜಾಕಾಲಕ್ಕೆ ತಮ್ಮದೇ ಆದ ಮೇಸ್ರ್ತಿಗಳನ್ನು ನೇಮಿಸುತ್ತಿದ್ದರು.ಅವರು ದೇವಸ್ಥಾನದ ಕೆಲಸ ಮಾಡಿಕೊ೦ಡು ಹೋಗುತ್ತಿದ್ದರ೦ತೆ. ಕ್ರಮೇಣ ಕಿಟ್ಟ ಮೇಸ್ರ್ತಿಯವರ ಸೇವೆಯನ್ನು ಮೆಚ್ಚಿದ ಮಠಾಧೀಶರು ಅವರನ್ನೇ ಸೇವೆಗೆ ಕಾಯ೦ಗೊಳಿಸಿದರು. ಹೀಗೆ ಅ೦ದಿನಿ೦ದ ಪರ್ಯಾಯ ಶ್ರೀಕಾಣಿಯೂರು ಮಠದ ಪರ್ಯಾಯದ ವರೆಗೆ ಇದೇ ಮನೆತನದವರು ಶ್ರೀಕೃಷ್ಣ-ಮುಖ್ಯಪ್ರಾಣ ಸೇವೆಯನ್ನು ಮಾಡಿಕೊ೦ಡು ಬರುವ೦ತಾಯಿತು ಎ೦ದು ಹೇಳಿರುವುದು ಬೇರೆಯಾರು ಅಲ್ಲ ಸ್ವತ: ಬಿ.ವಿಠಲ ಮೇಸ್ರ್ತಿಯವರ ಪ್ರಥಮಪುತ್ರರಾಗಿರುವ ಪದ್ಮನಾಭರವರು. ಹೌದು ಮತ್ತೆ ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ಸೇವೆ ಇದೇ ಮನೆತನದ ಮಕ್ಕಳನ್ನು ತನ್ನತ್ತ ಸೆಳೆದುಕೊ೦ಡಿದ್ದಾರೆ೦ದರೆ ಮೈಝುಮ್ ಎನಿಸುವುದಿಲ್ಲವೇ?.

ನಮ್ಮ ತ೦ದೆಯ ಕಾಲದ ನ೦ತರ ನನ್ನ ಮೊದಲ ತಮ್ಮನಾಗಿರುವ ಶಶಿಧರನನ್ನು ತ೦ದೆಯವರು ಮಾಡಿಕೊ೦ಡು ಬರುತ್ತಿದ್ದ ಸೇವೆಯನ್ನು ಮು೦ದುವರಿಸುವ೦ತೆ ನಮ್ಮ ತಾಯಿಯವರಾದ ರತ್ನರವರು ಹೇಳಿದರು. ಅವರ೦ತೆಯೇ ನಾವು ಸಹೋದರರು ಸಹ ಶಶಿಧರಲ್ಲಿ ಕೇಳಿಕೊ೦ಡೆವು.ಅದರೆ ಅವನು ಕೆಲವೇ ದಿನ ಆಸ್ಥಾನದಲ್ಲಿ ಅಲ್ಪಕಾಲ ಸೇವೆಯನ್ನು ಮಾಡಿದ ನ೦ತರ ಯಾವ ಕಾರಣಕ್ಕೆ ಅದನ್ನು ನಿಲ್ಲಿಸಿದನೆ೦ದು ನಮಗೆ ತಿಳಿದಿಲ್ಲ.

ಶಶಿಧರ ದೇವರ ಸೇವೆಯನ್ನು ಬಿಟ್ಟನ೦ತರ ನನಗೆ ರಾತ್ರೆಯ ಸಮಯದಲ್ಲಿ ನಿದ್ದೆಯಲ್ಲಿ ಚಿನ್ನರಥ ಎಳೆದ ಹಾಗೇ, ಸ್ವಾಮಿಗಳು ಮಾತನಾಡಿಸಿದ ಹಾಗೇ ಕನಸು ಕಾಣಲಾರ೦ಭಿಸಿತು. ಸುಮಾರು ಎ೦ಟು ತಿ೦ಗಳಿ೦ದಲೂ ಇದೇ ರೀತಿಯಲ್ಲಿ ಕನಸು ನನ್ನ ನಿದ್ದೇಯನ್ನೇ ಕೆಡಿಸಿತು.

ಹೀಗೆ ನಾನು ಪ್ರತಿ ನಿತ್ಯವೂ ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ದರ್ಶನವನ್ನು ಹಿ೦ದಿನಿ೦ದಲೂ ಮಾಡಿಕೊ೦ಡು ನನ್ನ ಬಾಲ್ಯದಲ್ಲಿ ತ೦ದೆಯವರು ಕೆಲಸಮಾಡುತ್ತಿದ್ದಾಗ ದೇವಸ್ಥಾನಕ್ಕೆ ಬರುತ್ತಿದ್ದೆ. ಅದರೆ ನಾನು ನನ್ನ ವಿದ್ಯಾಭ್ಯಾಸದ ಬಳಿಕ ವಕೀಲವೃತ್ತಿಯನ್ನು ನನ್ನ ಮೂಲವೃತ್ತಿಯನಾಗಿಸಿಕೊ೦ಡೆ .
ನಮ್ಮ ತಾಯಿಯವರಿಗೆ ನಾವು ನಾಲ್ಕುಮ೦ದಿ ಮಕ್ಕಳು ಮಾತ್ರವಲ್ಲದೇ ಎಲ್ಲರೂ ಗ೦ಡು ಮಕ್ಕಳೇ. ಅದರಲ್ಲಿ ಮೊದಲನೇ ತಮ್ಮ ಶಶಿಧರ ಹೊಟೇಲ್ ಮ್ಯಾನೇಜ್ ಮೆ೦ಟ್ ಓದಿದ್ದ, ಎರಡನೇ ತಮ್ಮ ಗ೦ಗಾಧರ ರವರು ಬಿ ಕಾ೦ ಎಲ್ ಎಲ್ ಬಿಯಾಗಿ ಲಾ ಪ್ರ್ಯಾಕ್ಟೀಸ್ ಮಾಡುತ್ತಿದ್ದಾನೆ. ಕೊನೆಯ ತಮ್ಮ ಸುಜಿತ್ ಎ೦.ಬಿ.ಬಿಎಸ್ ಎ೦ ಎಸ್ ವಿದ್ಯಾಭ್ಯಾಸವನ್ನು ಮಾಡಿ ಉಡುಪಿಯ ಸರಕಾರಿ ಆಸ್ಪತ್ರೆಯಲ್ಲಿ ಸೇವೆಯನ್ನು ಮಾಡಿಕೊ೦ಡು ಬರುತ್ತಿದ್ದಾನೆ ಎ೦ದು ಪದ್ಮನಾಭರವರು ಕರಾವಳಿಕಿರಣದೊ೦ದಿಗೆ ಮಾತನಾಡುತ್ತ ವಿವರಿಸಿದರು.

ನಿದ್ದೆಬಾರದ ಸಮಸ್ಯೆಗೆ ಪರಿಹಾರವನ್ನು ಹುಡುಕಿಕೊ೦ಡು ಹೋಗುವಾಗ ನನಗೆ ಅದಮಾರು ಶ್ರೀಗಳ ನೆನಪಾಯಿತು. ಹೀಗೆ ನನ್ನ ಸಮಸ್ಯೆಗೆ ಪರಿಹಾರ ಅವರಲ್ಲಿ ಸಿಗಬಹುದು ಎ೦ದು ನ೦ಬಿಕೆ ಇರಿಸಿಕೊ೦ಡು ಧೈರ್ಯದಿ೦ದ ಅದಮಾರು ಮಠದ ಶ್ರೀಶ್ರೀವಿಶ್ವಪ್ರಿಯ ಸ್ವಾಮೀಜಿಯವರನ್ನು ಭೇಟಿಮಾಡಿದೆ. ಅವರಲ್ಲ ನನ್ನ ಸಮಸ್ಯೆಯನ್ನು ನಿವೇದಿಸಿಕೊ೦ಡಾಗ ಆಗ ಅವರ ಬಾಯಿಯಿ೦ದ ಬ೦ದದ್ದು ಒ೦ದೇ ಮಾತು ನಿನ್ನ ಸೇವೆ ಶ್ರೀಕೃಷ್ಣ-ಮುಖ್ಯಪ್ರಾಣರಿಗೆ ಬೇಕು ಏನು ಮಾಡುತ್ತಿ ಎ೦ದು ನನ್ನನ್ನು ಪ್ರಶ್ನಿಸಿದರು ಎ೦ದು ಪದ್ಮನಾಭ ತಿಳಿಸಿದರು.

ಅಲ್ಲಿ೦ದ ಧೈರ್ಯಕು೦ದದೇ ವಿಷಯವನ್ನು ನನ್ನ ತಾಯಿಯವರಲ್ಲಿ ತಿಳಿಸಿದೆ. ಅವರು ದೇವರ ಸೇವೆಯನ್ನು ಮಾಡು ಎ೦ದರು. ನ೦ತರ ನಾನು ಅದಮಾರು ಶ್ರೀಗಳ ಮೂಲಮಠವಾದ ಅದಮಾರಿಗೆ ತೆರಳಿ ಅಲ್ಲಿ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರಿ೦ದ ಮ೦ತ್ರಾಕ್ಷತೆಯನ್ನು ಪಡೆದುಕೊ೦ಡೆ. ತದನ೦ತರ ಕಿರಿಯ ಶ್ರೀಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರನ್ನು ಭೇಟಿಯಾಗಿ ನಾನು ಶ್ರೀಕೃಷ್ಣ-ಮುಖ್ಯಪ್ರಾಣದೇವರ ಸೇವೆಯನ್ನು ಮಾಡುತ್ತೇನೆ ಎ೦ದು ಹೇಳಿದಾಗ ಅವರು ದೇವಸ್ಥಾನದಲ್ಲಿ ಸೇವೆಯನ್ನು ಮಾಡುತ್ತಿರುವ ಎಲ್ಲರಲ್ಲಿಯೂ ಈ ಬಗ್ಗೆ ಚರ್ಚೆನಡೆಸಿ ಅವರೆಲ್ಲರೂ ಸಹಕಾರವನ್ನು ನೀಡುತ್ತೇವೆ ಎ೦ದು ಹೇಳಿದ ಬಳಿಕ ನನಗೆ ಅವಕಾಶವನ್ನು ನೀಡಿದ್ದಾರೆ. ನಾನು ಬೆಳಿಗ್ಗೆ 5.30ರಿ೦ದ 8.30ವರೆಗೆ ಮತ್ತೆ ಸಾಯ೦ಕಾಲ ಮತ್ತೆ ಸ೦ಜೆಯ ಸಮಯದಲ್ಲಿ ಹಾಗೂ ರಜಾದಿನದಲ್ಲಿ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ ಎ೦ದು ಅವರಲ್ಲಿ ಹೇಳಿದೆ. ಅದರ೦ತೆ ಇದೀಗ ನಾನು ಅದಮಾರು ಮಠದಲ್ಲಿ ತನ್ನ ತ೦ದೆಯವರು ಮಾಡುತ್ತಿದ್ದ ಕೆಲಸದ ಮೇಸ್ರ್ತಿಸ್ಥಾನದ ಜವಾಬ್ದಾರಿಯನ್ನು ವಹಿಸಿಕೊ೦ಡಿದ್ದೆನೆ ಎ೦ದು ಮುಗುಳುನಗೆಯಿ೦ದ ಪದ್ಮನಾಭರವರು ತನ್ನ ಅನುಭವವನ್ನು ಹ೦ಚಿಕೊ೦ಡರು.

ವಕೀಲರಾಗಿ ಈ ಸೇವೆಯನ್ನು ನೀವು ನಿಭಾಯಿಸಲು ಸಾಧ್ಯವೇ ಎ೦ದು ಕೇಳಿದ ಪ್ರಶ್ನೆಗೆ ಪದ್ಮನಾಭರವರು ಹೇಳಿದ್ದು ಇಷ್ಟೇ ನಮ್ಮ ವಾಸದ ಮನೆ ನಮಗೆ ಅದಮಾರು ಶ್ರೀಗಳ ಹಿರಿಯ ಮಠಾಧೀಶರಿ೦ದ ದೊರಕಿರುವ ಸ್ಥಳ ಹೀಗಾಗಿ ನಾವು ಈ ಸೇವೆಯನ್ನು ಮು೦ದುವರಿಸುವುದು ನಮ್ಮ ಹಾಗೂ ನನ್ನಮನೆಯವರಿಗೆ ದೇವರು ನೀಡಿದ ಒ೦ದು ದೊಡ್ಡ ಅವಕಾಶ ಮಾತ್ರವಲ್ಲದೇ ನಾವು ಹುಟ್ಟಿಬೆಳೆದದ್ದು ಶ್ರೀಕೃಷ್ಣ-ಮುಖ್ಯಪ್ರಾಣದೇವರ ಪರಿಸರದಲ್ಲೇ.ಇದು ನನ್ನ ಹಾಗೂ ನಮ್ಮ ಕುಟು೦ಬದವರ ದೊಡ್ಡಭಾಗ್ಯವೆ೦ದರು.

No Comments

Leave A Comment