Log In
BREAKING NEWS >
ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ....

ಹೊಸದಾಖಲೆಯತ್ತ ಅದಮಾರು ಪರ್ಯಾಯ ದರ್ಬಾರ್ ಪಾಸ್…

ಶನಿವಾರದ೦ದು ಪರ್ಯಾಯ ಪೀಠವನ್ನೇರಲಿರುವ ಅದಮಾರು ಮಠದ ಕಿರಿಯ ಯತಿಶ್ರೀಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಈ ಬಾರಿ ಪ್ರಥಮಬಾರಿ ಸರ್ವಜ್ಞಪೀಠವನ್ನೇರಲಿದ್ದಾರೆ. ಎಲ್ಲವೂ ವ್ಯವಸ್ಥೆಗೆ ವಿಭಿನ್ನರೀತಿಯಲ್ಲಿಯೇ ತಯಾರಿಮಾಡಲಾಗಿದೆ. ಆರ೦ಭದ ಪುರಪ್ರವೇಶದಿ೦ದ ಹಿಡಿದು ಪರ್ಯಾಯ ದರ್ಬಾರ್ ನವರೆಗೂ ಈ ವ್ಯವಸ್ಥೆಯು ಜಾರಿಗೆ ಬರಲಿದೆ.

ಪರ್ಯಾಯ ದರ್ಬಾರ್ ಪಾಸಿನಲ್ಲಿ ಒ೦ದು ಹೊಸ ವ್ಯವಸ್ಥೆಯನ್ನುಅಳವಡಿಸಲಾಗಿದೆ. ಈ ಪಾಸನ್ನು ಯಾರು ಸಹಾ ಉಪಯೋಗದ ಬಳಿಕ ದಾರಿಯಲ್ಲಿ ಬೀಸಾಡದೇ ತಮ್ಮ ತಮ್ಮ ಮನೆಯಲ್ಲಿರುವ ತೆ೦ಗಿನ ಕಟ್ಟೆಯೋ,ಹೂವಿನಗಿಡದ ಚಟ್ಟಿಯಲ್ಲಿ ಹಾಕಿದರೆ ಅದರಲ್ಲಿ ಔಷಧಿಗಿಡಗಳನ್ನು ಪಡೆಯ ಬಹುದಾಗಿದೆ ಎ೦ದು ಈಪಾಸಿನಲ್ಲಿ ಮುದ್ರಿಸಲಾಗಿದೆ. ಆದ್ದರಿ೦ದ ಭಕ್ತಜನರು ಈ ಬಾರಿಯ ಪರ್ಯಾಯ ದರ್ಬಾರಿಗೆ ಉಪಸ್ಥಿತಿಯ ಬಳಿಕ ಈ ಪಾಸನ್ನು ತಮ್ಮೊ೦ದಿಗೆ ತಮ್ಮ ಮನೆಗೆ ತೆಗೆದುಕೊ೦ಡು ಹೋಗಿ ಔಷಧಿಗಿಡವನ್ನು ಪಡೆಯಬಹುದು ಎ೦ಬುದನ್ನು ಮರೆಯ ಬೇಡಿ. ಇದು ಇತಿಹಾಸದ ದಾಖಲೆ ಪುಟ್ಟಕ್ಕೆ ಸೇರಲಿದೆ.

No Comments

Leave A Comment