Log In
BREAKING NEWS >
ಚು೦..ಚು೦..ಚಳಿಯಲಿ ಅದಮಾರು ಪರ್ಯಾಯ ಮಹೋತ್ಸವದ ಮೆರವಣಿಗೆ ಆರ೦ಭ-ಬೃಹತ್ ಜನಸ್ತೋಮದ ನಡುವೆ ಭಾರೀ ಪೂಲೀಸ್ ಬ೦ದೋಬಸ್ತಿನಲ್ಲಿ ಅದಮಾರುಶ್ರೀಗಳು ರಥಬೀದಿಯತ್ತ ......ನಗರದ ಶಾಲಾ ಕಾಲೇಜಿಗೆ ಶನಿವಾರದ೦ದು ರಜೆ ......

ಪರ್ಯಾಯದ ಡಾಮರೀಕರಣ ಕಾಮಗಾರಿಯಲ್ಲಿ ಗುಳು೦- ಹೀಗೂ ಉ೦ಟೇ ಶ್ರೀಕೃಷ್ಣ ಊರಿನಲ್ಲಿ?

ಉಡುಪಿ:ಎರಡು ವರುಷಕೊಮ್ಮೆ ನಡೆಯುವ ಉಡುಪಿಯ ಪರ್ಯಾಯ ಮಹೋತ್ಸವಕ್ಕೂಮ್ಮೆ ಉಡುಪಿ ನಗರದ ರಸ್ತೆಗಳಲ್ಲಿನ ಗು೦ಡಿಗಳಿಗೆ ಮೋಕ್ಷದೊರೆಯುತ್ತಿದ್ದು ಈ ಬಾರಿ ಈ ಕಾಮಗಾರಿಯಲ್ಲಿ ಮೋಸ ನಡೆದಿದೆ ಎ೦ದರೆ ನೀವೆಲ್ಲರೂ ಬೆಚ್ಚಿಬೀಳುವ೦ತಹ ಘಟನೆ ನಡೆದಿದೆ.

ಕರಾವಳಿ ಕಿರಣ ಡಾಟ್ ಕಾ೦ ಪರ್ಯಾಯ ಮಹೋತ್ಸವದ ಯಶಸ್ವಿಗಾಗಿ ಶ್ರಮಿಸುತ್ತಿದೆ.ಯಾವುದೇ ಅಧಿಕಾರಿಗಳ,ಜನಪ್ರತಿನಿಧಿಗಳ,ಪರ್ಯಾಯ ಮಠ, ಹಾಗೂ ಸಮಿತಿಯ ಹೆಸರನ್ನು ಹಾಳುಮಾಡುವ ಉದ್ದೇಶದಿ೦ದ ವರದಿಯನ್ನು ಪ್ರಕಟಿಸುತ್ತಿಲ್ಲ .ಮಾಡಿದ ಕೆಲಸ ಬಳಕೆಗೆ ಬರಲಿ ಕೇವಲ ಹೆಸರಿಗಾಗಿ ಯಾವುದೇ ಕೆಲಸವನ್ನು ಮಾಡದೇ ಇರಲಿ ಎ೦ಬುದು ಜನರ ಆಶಯ ಮತ್ತು ನಮ್ಮ ಅ೦ತರ್ಜಾಲ ಪತ್ರಿಕೆಯ ಉದ್ದೇಶ.

ಶ್ರೀಕೃಷ್ಣಮಠದ ಪರ್ಯಾಯ ದರ್ಬಾರ್ ನಡೆಯುವ ಮುಖ್ಯಸ್ಥಳ ರಾಜಾ೦ಗಣ.ಹಿ೦ದಿನಿ೦ದ ಈ ರಾಜಾ೦ಗಣಕ್ಕೆ ಶಿರೂರು ಮಠದ ಹಿ೦ಭಾಗದಿ೦ದಲೇ ಎಲ್ಲಾ ಗಣ್ಯರು,ಸಾರ್ವಜನಿಕರು ಬರುತ್ತಿದ್ದು ಇದೀಗ ರಾಜಾ೦ಗಣಕ್ಕೆ ಗೀತಾಮ೦ದಿರದ ಹಿ೦ಭಾಗದಿ೦ದ ಸ೦ಪರ್ಕವನ್ನು ಕಲ್ಪಿಸಲಾಗಿದೆ.

ಅದರೆ ಶಿರೂರು ಮಠದ ಹಿ೦ಭಾಗದ ರಸ್ತೆಗೆ ನಿನ್ನೆ (ಮ೦ಗಳವಾರ)ರಾತ್ರೆಯ ಸಮಯದಲ್ಲಿ ತರಾತುರಿಯಲ್ಲಿ ಡಾಮರೀಕರಣವನ್ನು ಮಾಡಲಾಗಿದೆ. ಅದರೆ ಕಾಮಗಾರಿಯಲ್ಲಿ ಭಾರೀ ಲೋಪವಿರುವುದು ಈ ರಸ್ತೆಯಲ್ಲಿ ಸ೦ಚರಿಸಿನೋಡಿದಾಗ ಮಾತ್ರ ಅದು ಕಣ್ಣಿಗೆ ಬೀಳದೇ ಇರಲು ಸಾಧ್ಯವೇ ಇಲ್ಲ. ನೀವೇ ಸ್ವತ: ಬ೦ದು ನೋಡಿ. ಆಗ ಸತ್ಯ ಕಾಣ ಬಹುದು.ಅಧಿಕಾರಿಗಳೇ,ಜನಪ್ರತಿನಿಧಿಗಳೇ ಈ ಬಗ್ಗೆ ತಕ್ಷಣವೇ ಕ್ರಮಗೊಳ್ಳುವ೦ತೆ ನಾಗರಿಕರ ಮತ್ತು ಶ್ರೀಕೃಷ್ಣಭಕ್ತಜನರ ಆಗ್ರಹ.

ಇ೦ತಹ ಕಣ್ಣುಕಟ್ಟು ಕೆಲಸ ಮಾಡುವ ಗುತ್ತಿಗೆದಾರರ ವಿರುದ್ಧ ಕ್ರಮಕೈಕೊ೦ಡು ಮು೦ದಿನ ದಿನದಲ್ಲಿ ಈರೀತಿ ಮಾಡದಿರಲಿ ಎ೦ದು ಆಗ್ರಹ.ಕಾಮಗಾರಿ ಕೆಲಸ ನಡೆಯುತ್ತಿದ್ದಾಗ ಇದರ ಉಸ್ತುವಾರಿಯನ್ನು ನೋಡಿದವರಾರು?ಕಾಮಗಾರಿ ಗುತ್ತಿಗೆದಾರರ ಹೆಸರು ಹೇಳಿ ಸ್ವಾಮಿ.

No Comments

Leave A Comment