Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಪ್ರಥಮ ಏಕದಿನ : ಆಸೀಸ್ ಬಿಗು ದಾಳಿ ; ಭಾರತ 255ಕ್ಕೆ ಆಲೌಟ್

ಮುಂಬಯಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್ ವೇಗಿಗಳ ಮುಂದೆ ಭಾರತದ ಬ್ಯಾಟಿಂಗ್ ಪಡೆ ಕಂಗಾಲಾಗಿದೆ. ಶಿಖರ್ ಧವನ್ (74), ಕೆ.ಎಲ್. ರಾಹುಲ್ (47), ರಿಷಭ್ ಪಂತ್ (28) ಮತ್ತು ರವೀಂದ್ರ ಜಡೇಜಾ (25) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ 49.1 ಓವರುಗಳಲ್ಲಿ 255 ರನ್ ಗಳಿಸಿ ಆಲೌಟಾಗಿದೆ. ಈ ಮೂಲಕ ಆಸೀಸ್ ಗೆಲುವಿಗೆ 256 ರನ್ ಗಳ ಗುರಿ ನಿಗದಿಯಾಗಿದೆ.

ಟಾಸ್ ಗೆದ್ದು ಭಾರತಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟ ಆಸ್ಟ್ರೇಲಿಯಾ ಕಪ್ತಾನ ಆರೋನ್ ಫಿಂಚ್ ನಿರ್ಧಾರ ಇನ್ನಿಂಗ್ಸ್ ನ ಪ್ರಾರಂಭದಲ್ಲೇ ಯಶ ಕಂಡಿತು. ರೋಹಿತ್ ಶರ್ಮಾ (10) ಅವರ ವಿಕೆಟ್ ತಂಡದ ಮೊತ್ತ 13 ರನ್ ಗಳಾಗುವಷ್ಟರಲ್ಲಿ ಬಿದ್ದಿತ್ತು. ಆದರೆ ಎರಡನೇ ವಿಕೆಟಿಗೆ ಧವನ್ ಮತ್ತು ರಾಹುಲ್ ಸೇರಿಕೊಂಡು ನಿಧಾನಗತಿಯಲ್ಲಿ ತಂಡದ ಮೊತ್ತವನ್ನು ಏರಿಸುತ್ತಾ ಹೋದರು. ಈ ಸಂದರ್ಭದಲ್ಲಿ ಮೊತ್ತ 134 ಆಗಿದ್ದಾಗ 61 ಎಸೆತೆಗಳಲ್ಲಿ 47 ರನ್ ಮಾಡಿದ್ದ ರಾಹುಲ್ ಔಟಾದರು. ಈ ಜೋಡಿ 121 ರನ್ ಗಳ ಜೊತೆಯಾಟವನ್ನು ನೀಡಿದರು.

ಆದರೆ ರಾಹುಲ್ ಔಟಾದ ಬೆನ್ನಲ್ಲೇ 74 ರನ್ ಮಾಡಿ ಉತ್ತುಮವಾಗಿ ಆಡುತ್ತಿದ್ದ ಶಿಖರ್ ಧವನ್ ಔಟಾದರು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ (16), ಮತ್ತು ಶ್ರೇಯಸ್ ಅಯ್ಯರ್ (04) ಮಿಂಚಲು ವಿಫಲರಾದರು.

ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ (28) ಹಾಗೂ ರವೀಂದ್ರ ಜಡೇಜಾ (25) ಅವರು 49 ರನ್ ಗಳ ಅಮೂಲ್ಯ ಜೊತೆಯಾಟ ಕಟ್ಟಿದರು. ಇದರಿಂದಾಗಿ ತಂಡದ ಮೊತ್ತ 200ರ ಗಡಿ ದಾಟುವಂತಾಯಿತು.

ಇನ್ನಿಂಗ್ಸ್ ನ ಪ್ರಾರಂಭದಿಂದಲೇ ಬಿಗು ದಾಳಿ ಸಂಘಟಿಸಿದ ಆಸೀಸ್ ತ್ರಿವಳಿ ವೇಗಿಗಳು ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ನಿಡಿಯಲು ಅವಕಾಶವನ್ನೇ ನೀಡಲಿಲ್ಲ. ಅನುಭವಿ ವೇಗಿ ಮಿಶೆಲ್ ಸ್ಟಾರ್ಕ್ 03 ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ ಮತ್ತು ಕೇನ್ ರಿಚರ್ಡ್ಸನ್ ತಲಾ 02 ವಿಕೆಟ್ ಪಡೆದರೆ, ಸ್ಪಿನ್ನರ್ ಗಳಾದ ಆ್ಯಡಂ ಝಂಪ ಮತ್ತು ಆಶ್ಟನ್ ಆ್ಯಗರ್ ತಲಾ 01 ವಿಕೆಟ್ ಪಡೆದರು.

No Comments

Leave A Comment