Log In
BREAKING NEWS >
ಪರಿಸರಕ್ಕೆ ಕೋವಿಡ್ 19 ಉಪಕಾರ ; ಜಗತ್ತಿನಾದ್ಯಂತ ವಾಯುಮಾಲಿನ್ಯ ತೀವ್ರ ಇಳಿಕೆ.....ಕೋವಿಡ್-19: ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಏಪ್ರಿಲ್ 14ರವರೆಗೆ ನಿಷೇಧ...

ಬಸ್ ಚಲಿಸುವ ವೇಳೆ ಕುಸಿದ ರಸ್ತೆ: ಹತ್ತು ಪ್ರಯಾಣಿಕರು ನಾಪತ್ತೆ

ಶಾಂಘೈ (ಚೀನಾ): ಬಸ್ಸೊಂದು ಸಂಚರಿಸುತ್ತಿದ್ದ ವೇಳೆಯೇ ರಸ್ತೆ ಕುಸಿದು ಹೋದ ಪರಿಣಾಮ ಬಸ್ ನಲ್ಲಿದ್ದ ಕನಿಷ್ಠ ಹತ್ತು ಪ್ರಯಾಣಿಕರು ನಾಪತ್ತೆಯಾದ ಘಟನೆ ಚೀನಾದ ಶಾಂಘೈನಲ್ಲಿ ನಡೆದಿದೆ.

ಈ ಅವಗಢ ಸೋಮವಾರ ಸಂಜೆಯ ವೇಳೆಗೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಗ್ರೇಟ್ ವಾಲ್ ಆಸ್ಪತ್ರೆಗೆ ಮುಂಭಾಗದಲ್ಲಿ ರಸ್ತೆಯ ಒಂದು ಭಾಗ ಕುಸಿದು ಕಂದಕ ಉಂಟಾಗಿದೆ. ಅದೇ ವೇಳೆ ಅಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕ ಸಂಸ್ಥೆಯ ಬಸ್ ಅದರೊಳಗೆ ಬಿದ್ದಿದೆ. ಬಸ್ ಬಿದ್ದ ರಭಸಕ್ಕೆ ಅದು ಸ್ಫೋಟಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳೀಯರ ಪ್ರಕಾರ ಕನಿಷ್ಠ ಹತ್ತು ಜನರು ನಾಪತ್ತೆಯಾಗಿದ್ದಾರೆ. ಮತ್ತು 15 ಜನರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಕ್ಷಣಾ ಕಾರ್ಯ ಮುಂದುವರಿದಿದೆ. ಘಟನೆಯ ಬಗ್ಗೆ ತನಿಖೆಯೂ ಆರಂಭವಾಗಿದೆ.

No Comments

Leave A Comment