Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರಿಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಗೌರವಾರ್ಪಣೆ

ಉಡುಪಿ:ಭಾವಿ ಪರ್ಯಾಯ ಪೀಠಾಧಿಪತಿಗಳಾದ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ಪೇಜಾವರ ಮಠದ ವತಿಯಿಂದ ಮುಚ್ಚಿಲ್ಗೋಡ್ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಟ್ಟದ ದೇವರ ಪೂಜೆ,ಔತಣದೊಂದಿಗೆ ವಿಶೇಷ ಗೌರವಾರ್ಪಣೆ ನಡೆಯಿತು.

ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ದೇವತಾ ಕಾರ್ಯಕ್ಕೆ ಬೇಕಾದ ವಸ್ತುಗಳನ್ನು ನೀಡಿ ಶಾಲು ಹೊದೆಸಿ ಗೌರವಿಸಿದರು.ಈ ಸಂದರ್ಭದಲ್ಲಿ ತೆಂಗಿನ ಗರಿಯಿಂದ ಮಾಡಿದ ವಿಶೇಷ ಟೋಪಿಯನ್ನು ಹಾಕಿದರು. ಶ್ರೀ ಕೃಷ್ಣ ದೇವರ ಸೇವೆ ಮಾಡುವುದಕ್ಕೆ ವಾದಿರಾಜ ಶ್ರೀಪಾದರು 2 ತಿಂಗಳಿಗೆ ಇದ್ದ ಪರ್ಯಾಯಾವಧಿಯನ್ನು 2 ವರ್ಷಗಳಿಗೆ ಮಾರ್ಪಾಟು ಮಾಡಿದರು.

ನಾಡಿನಾದ್ಯಂತ ಸಂಚಾರ ಮಾಡಿ ಸರ್ವಜ್ಞ ಪೀಠವನ್ನೇರಲಿರುವ ಶ್ರೀಪಾದರಿಗೆ ಪರ್ಯಾಯ ಕಾಲದಲ್ಲಿ ನಮ್ಮ ಪೂರ್ಣ ಸಹಕಾರ ಕೊಡುವುದರೊಂದಿಗೆ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಮಠ ಮಠಗಳ ಸಂಬಂಧವನ್ನು ಉತ್ತಮ ರೀತಿಯಲ್ಲಿ ಬೆಳೆಸುತ್ತೇವೆ ಎಂದು ಪೇಜಾವರ ಮಠಾಧೀಶರು ಸಂದೇಶ ನೀಡಿದರು

No Comments

Leave A Comment