Log In
BREAKING NEWS >
ನ್ಯಾಯಬೆಲೆ ಅ೦ಗಡಿಯಲ್ಲಿ ಪಡಿತರ ವಿತರಣೆಗೆಗಾಗಿ ಪರದಾಟ-ರಾಜ್ಯಸರಕಾರದಿ೦ದ ಜನರಿಗೆ ಭಾರೀ ಅನ್ಯಾಯ-ಜನರಿ೦ದ ಆಕ್ರೋಶ ....

ಶ್ರೀ ಕೃಷ್ಣಮಠದಲ್ಲಿ 16 ಮಂದಿ ವಿದ್ಯಾರ್ಥಿಗಳಿಗೆ ಸುಧಾ ಮಂಗಲೋತ್ಸವ

ಉಡುಪಿ:ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ನಡೆಸಲ್ಪಡುವ ಯೋಗದೀಪಿಕಾ ಗುರುಕುಲ ಹಾಗೂ ತತ್ವದೀಪಿಕಾ ಗುರುಕುಲದಲ್ಲಿ 10 ವರ್ಷಗಳಲ್ಲಿ ಅಧ್ಯಯನ ನಡೆಸಿ 2 ವರ್ಷಗಳಲ್ಲಿ ಪರ್ಯಾಯ ಶ್ರೀಪಾದರಿಂದ ಶ್ರೀಮನ್ನ್ಯಾಯಸುಧಾ ಪಾಠವನ್ನು ಅಧ್ಯಯನ ಮಾಡಿದ 16 ಮಂದಿ ವಿದ್ಯಾರ್ಥಿಗಳಿಗೆ ಸುಧಾ ಮಂಗಲೋತ್ಸವ ನಡೆಯಿತು.

ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನಡೆಸಿದ 12 ನೇ ಸುಧಾ ಮಂಗಲೋತ್ಸವವು ಇದಾಗಿದ್ದು ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು,ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು,ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಭಾವಿ ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಪಾಲ್ಗೊಂಡು ಅನುಗ್ರಹ ಸಂದೇಶ ನೀಡಿದರು.

No Comments

Leave A Comment