Log In
BREAKING NEWS >
ಮಂಗಳೂರು:ಡಿಸೆಂಬರ್‌ನಿಂದ ಮರಳುಗಾರಿಕೆ ಸ್ಥಗಿತ; ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆ....

ಮಂಗಳೂರು: ದಾಖಲೆ ಇಲ್ಲದ ಸುಮಾರು 5,48,000 ರೂಪಾಯಿಯ ವಿದೇಶಿ ಕರೆನ್ಸಿ ಪತ್ತೆ

ಮಂಗಳೂರು: ದಾಖಲೆ ಇಲ್ಲದ ಸುಮಾರು 5,48,000 ರೂಪಾಯಿಯ ವಿದೇಶಿ ಕರೆನ್ಸಿಗಳನ್ನು ಹೊಂದಿದ್ದ ದುಬೈಗೆ ಸಂಚರಿಸುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಎಫ್‌ಎಸ್‌ಎಫ್ ಅಧಿಕಾರಿಗಳು ಶನಿವಾರ ಮುಂಜಾನೆ 6.30 ಗಂಟೆಗೆ ಪ್ರಯಾಣಿಕರ ಬ್ಯಾಗೇಜುಗಳ ತಪಾಸಣೆ ಮಾಡುತ್ತಿದ್ದ ವೇಳೆ ದುಬೈಗೆ ಸ್ಪಯ್ಸ್ ಜೆಟ್ ವಿಮಾನದ ಮೂಲಕ ತೆರಳಲಿದ್ದ ಪ್ರಯಾಣಿಕ ಶಾಹುಲ್ ಹಮೀದ್‌ನ ಕೈ ಚೀಲದಲ್ಲಿ ಅನುಮಾನಾಸ್ಪದ ಚಿತ್ರವನ್ನು ಗಮನಿಸಿದ್ದು ಪರಿಶೀಲನೆ ನಡೆಸಿ ವಿದೇಶಿ ಕರೆನ್ಸಿಗಳನ್ನು ಪತ್ತೆ ಹಚ್ಚಿದ್ದಾರೆ.

ಪ್ರಯಾಣಿಕನಿಂದ ಯುಎಸ್ ಡಾಲರ್ (76×100), ಚೀನೀ ಕರೆನ್ಸಿ (1000×10 ಮತ್ತು 110×10), ಮಲೇಷ್ಯಾ ಕರೆನ್ಸಿ (50×1, 10×01 ಮತ್ತು 1×3), ಟರ್ಕಿ ಕರೆನ್ಸಿ (10×2) ಸೇರಿದಂತೆ ಅಂದಾಜು 5,48,000 ರೂಪಾಯಿಯೊಂದಿಗೆ ಆತನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

No Comments

Leave A Comment