Log In
BREAKING NEWS >
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಆಯ್ಕೆ....ಅನಾಮಧೇಯ ವ್ಯಕ್ತಿ ಬ್ಯಾಗ್ ಇಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಗೃಹ ಸಚಿವ ಬೊಮ್ಮಾಯಿ....

ಕಲಬುರಗಿ: ಪೌರತ್ವ ಕಾಯ್ದೆ ಪರ ಬೃಹತ್ ತಿರಂಗ ಧ್ವಜದ ಮೆರವಣಿಗೆ

ಕಲಬುರಗಿ:  ಪೌರತ್ವ ಕಾಯ್ದೆ ಬೆಂಬಲಿಸಿ ನಗರದಲ್ಲಿ ಕಲಬುರಗಿ ನಾಗರಿಕ ಸಮಿತಿ ವತಿಯಿಂದ ಬೃಹತ್ ತಿರಂಗ ಧ್ವಜದ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ತಿರಂಗ ಧ್ವಜ ಎಲ್ಲೆಡೆ ರಾರಾಜಿಸುತ್ತಿದೆ.

ನಗರೇಶ್ವರ ಶಾಲೆಯಿಂದ ಮೆರವಣಿಗೆ ಆರಂಭವಾಗಿದೆ. ವಿವಿಧ ಮಠಾಧೀಶರು, ಬಿಜೆಪಿ ಮುಖಂಡರು, ಸಾವಿರಾರು ಜನರು ಪಾಲ್ಗೊಂಡಿದ್ದಾರೆ.

ತಿರಂಗ ಹಿಡಿದು ಪೌರತ್ವ ಕಾಯ್ದೆ, ಪ್ರಧಾನಿ ಮೋದಿ ಪರ ಘೋಷಣೆ ಕೂಗುತ್ತಿದ್ದಾರೆ.

No Comments

Leave A Comment