Log In
BREAKING NEWS >
ಮಂಗಳೂರು:ಡಿಸೆಂಬರ್‌ನಿಂದ ಮರಳುಗಾರಿಕೆ ಸ್ಥಗಿತ; ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆ....

ಯಾದಗಿರಿ: ನಿಂತಿದ್ದ ಕಬ್ಬಿನ ಲಾರಿಗೆ ಆಟೋ ಡಿಕ್ಕಿ; ಸ್ಥಳದಲ್ಲೇ ಮೂವರ ಸಾವು

ಯಾದಗಿರಿ: ನಿಂತಿದ್ದ  ಕಬ್ಬಿನ ಲಾರಿಗೆ  ಆಟೋ ಡಿಕ್ಕಿ ಹೊಡೆದು  ತಾಯಿ-ಮಗ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಡಗೇರಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಬಾಷಪ್ಪ (35), ರಮೇಶ್ (30), ಸಿದ್ದಮ್ಮ (55) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಿನ ಜಾವ ಯಾದಗಿರಿಯಿಂದ ಉಳ್ಳೆಸೂಗುರು ಮತ್ತು ಹಾಲಗೇರಾ ಗ್ರಾಮಗಳ ಕಡೆ ಪ್ರಯಾಣಿಕರನ್ನು ತುಂಬಿಕೊಂಡು ತೆರಳುತ್ತಿದ್ದ ಆಟೋ, ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಕಬ್ಬಿನ ಲಾರಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ಮೃತ ಬಾಷಪ್ಪ ಹಾಲಗೆರಾ ಗ್ರಾಮದವನಾಗಿದ್ದು, ರಮೇಶ್ ಮತ್ತು ಸಿದ್ದಮ್ಮ ತಾಯಿ-ಮಗ ಎಂದು ತಿಳಿದು ಬಂದಿದೆ. ಇವರು ಕಲಬುರಗಿ ಮೂಲದ ಚಿತ್ತಾಪುರ ತಾಲೂಕಿನ ಹಲಕಟ್ಟಿ ಗ್ರಾಮದವರಾಗಿದ್ದು, ಹಾಲಗೇರಾದಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ವಡಗೇರಾ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

No Comments

Leave A Comment