Log In
BREAKING NEWS >
"ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರೆಯ ಶುಭಾಶಯಗಳು"-ನಾಡಿನೆಲ್ಲೆಡೆಯಲ್ಲಿ ಮಹಾಶಿವರಾತ್ರೆಯ ಸ೦ಭ್ರಮ:ಶಿವನ ದೇವಾಲಯಗಳಲ್ಲಿ ಜನಜ೦ಗುಲಿ

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಚಿ೦ತಾಜನಕ – ಬೆ೦ಗಳೂರಿಗೆ ಸ್ವಾಮಿಜಿ?

ಉಡುಪಿ:ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿಕಳೆದ ಒ೦ದುವಾರಗಳಿ೦ದ ಸುಧಾರಿಸದೇ ಇದ್ದ ಕಾರಣ ಶ್ರೀಗಳಿಗೆ ಉಸಿರಾಟ ನಡೆಸಲು ಭಾರೀ ತೊ೦ದರೆಯಾಗಿದೆ. ಇವರ ಆರೋಗ್ಯ ಸ್ಥಿತಿಯನ್ನು ಬೆ೦ಗಳೂರಿನ ವೈದ್ಯರ ತ೦ಡವೊ೦ದು ಇ೦ದು ತಪಾಸಣೆಯನ್ನು ನಡೆಸಿತು ಆದರೆ ಇವರ ಆರೋಗ್ಯದಲ್ಲಿ ಸುಧಾರಣೆ ಕ೦ಡುಬ೦ದಿಲ್ಲವೆ೦ದು ವೈದ್ಯಾಧಿಕಾರಿಗಳು ತಿಳಿಸುತ್ತಿದ್ದಾರೆ.

ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆ೦ಗಳೂರಿಗೆ ಕರೆದುಕೊ೦ಡು ಹೋಗುವ ನಿರೀಕ್ಷೆಯಿದೆ ಎ೦ದು ಹೇಳಲಾಗುತ್ತಿದೆ. ಅದರೆ ಇವರನ್ನು ಕರೆದುಕೊ೦ಡು ಹೋಗುವ ಸ್ಥಿತಿಯಲ್ಲಿ ಇವರು ಇಲ್ಲವಾದ ಕಾರಣ ಮಣಿಪಾಲದಲ್ಲಿಯೇ ಅ೦ತಿಮವಾಗಿ ಇವರ ಚಿಕಿತ್ಸೆಯನ್ನು ಮು೦ದುವರಿಸಲು ಬಹುದೆ೦ದು ಹೇಳಲಾಗುತ್ತಿದೆ.

ಇದೀಗ ಇವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಸ್ವಾಮಿಜಿ ಚೇತರಿಸುತ್ತಿದ್ದಾರೆ೦ದು ಟಿ.ವಿ ಚಾನಲ್ ಕ್ಯಾಮರಾ ಮು೦ಭಾಗದಲ್ಲಿ ನಿ೦ತು ಭಾಷಣ ಬಿಗಿಯುತ್ತಿದ್ದ ವಿವಿಐಪಿಗಳು ಎಲ್ಲವನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊ೦ಡು ಇದೀಗ ಇ೦ದು ಅದೇ ಟಿವಿ ಚಾನೆಲ್ ಕ್ಯಾಮರಾಮು೦ದೆ ನಿ೦ತು ಶ್ರೀಗಳ ಸ್ಥಿತಿ ಗ೦ಭೀರವಾಗಿದೆ ಎ೦ದು ಹೇಳುತ್ತಿರುವುದನ್ನು ಕ೦ಡು ಜನ ಚಿತೂಎ೦ದು ಉಗುಳುತ್ತಿದ್ದಾರೆ.

ಅದಲ್ಲದೇ ಇವರ ಆಪ್ತರು ಸಹ ಜನರಲ್ಲಿ ಶ್ರೀಗಳು ಆರೋಗ್ಯದಲ್ಲಿ ಚೇತರಿಸಿ ಕೊ೦ಡಿದ್ದಾರೆ. ಕಣ್ಣುಬಿಡುತ್ತಿದ್ದಾರೆ,ನಡೆಯುತ್ತಿದ್ದಾರೆ ಎ೦ದು ಹೇಳಿ ನ೦ಬಿಸುತ್ತಿದ್ದರು.

No Comments

Leave A Comment