Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ಏಕದಿನ ಕದನ: ವಿಂಡೀಸ್ ವಿರುದ್ಧ ಶಿವಂ ದುಬೆ ಏಕದಿನ ಪದಾರ್ಪಣೆ

ಚೆನ್ನೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ದದ ಪ್ರಥಮ ಏಕದಿನ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಗೆ ಇಳಿಯಲಿದೆ. ಟಿ ಟ್ವೆಂಟಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಶಿವಂ ದುಬೆ ಏಕದಿನ ಮಾದರಿಗೆ ಪದಾರ್ಪಣೆಗೈದರು.

ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಕೈರನ್ ಪೊಲಾರ್ಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದರು. ನಂತರ ಮಾತನಾಡಿದ ವಿರಾಟ್ ಕೊಹ್ಲಿ ನಾವೂ ಬ್ಯಾಟಿಂಗ್ ಮಾಡಲು ಬಯಸಿದ್ದೆವು ಎಂದರು.

ತಂಡಗಳು

ಭಾರತ: ಲೋಕೇಶ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೇದಾರ್ ಜಾದವ್, ಶಿವಂ ದುಬೆ, ರವೀಂದ್ರ ಜಡೇಜಾ, ದೀಪಕ್ ಚಾಹರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ.

ವೆಸ್ಟ್ ಇಂಡೀಸ್: ಶಾಯ್ ಹೋಪ್, ಸುನೀಲ್ ಆಂಬ್ರೋಸ್, ಶಿಮ್ರನ್ ಹೆಟ್ಮೆರ್, ನಿಕೋಲಸ್ ಪೂರನ್, ರೋಸ್ಟನ್ ಚೇಸ್, ಕೈರನ್ ಪೊಲಾರ್ಡ್, ಜೇಸನ್ ಹೋಲ್ಡರ್, ಕೀಮೋ ಪೌಲ್, ಹೇಡನ್ ವಾಲ್ಶ್, ಅಲ್ಜಾರಿ ಜೋಸೆಫ್, ಶೆಲ್ಡನ್ ಕಾಟ್ರೆಲ್.

No Comments

Leave A Comment