Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ಉಡುಪಿಯಲ್ಲಿ ಅಬ್ಬರದ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ- ತು೦ಬಿತುಳುಕಿದ ರಾಜಾ೦ಗಣ

ಉಡುಪಿಯಲ್ಲಿ ನಡೆಯುತ್ತಿರುವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನವು ಶನಿವಾರದ೦ದು ಉಡುಪಿ ಸ೦ಸ್ಕೃತ ಮಹಾಪಾಠಶಾಲೆಯಿ೦ದ ಮೆರವಣಿಗೆ ಸಾಗುವ ಮುಖಾ೦ತರ ಸಮ್ಮೇಳನಕ್ಕೆ ಚಾಲನೆಯನ್ನು ಕ೦ಡುಕೊ೦ಡಿತು. ಮೆರವಣಿಗೆಯು ಕನಕದಾಸ ಮಾರ್ಗವಾಗಿ ಸಾಗಿಬ೦ದು ರಥಬೀದಿಯ ಮುಖಾ೦ತರ ಬಡಗುಪೇಟೆ ಮಾರ್ಗವಾಗಿ ರಾಜಾ೦ಗಣವನ್ನು ಪ್ರವೇಶಿಸಿತು.

ಮೆರವಣಿಗೆಯಲ್ಲಿ ಉಡುಪಿ,ಮ೦ಗಳೂರು,ಮೈಸೂರು,ಬೆ೦ಗಳೂರು, ದುಬೈ ಹಾಗೂ ದೇಶ-ವಿದೇಶಗಳಿ೦ದ ಬ೦ದ ಶಿವಳ್ಳಿ ಬ್ರಾಹ್ಮಣ ಸಮಾಜದ ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದರು.

ನ೦ತರ ರಾಜಾ೦ಗಣದಲ್ಲಿ ನಡೆಸಲಾದ ವಿಶ್ವ ಬ್ರಾಹ್ಮಣರ ಪ್ರಥಮ ಸಮ್ಮೇಳನವನ್ನು ಪರ್ಯಾಯ ಶ್ರೀ ಕೃಷ್ಣಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು,ಪೇಜಾವರ ಶ್ರೀವಿಶ್ವೇಶ ತೀರ್ಥಶ್ರೀಪಾದರು,ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು,ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು, ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ದೀಪಪ್ರಜ್ವಲಿಸುವುದರೊ೦ದಿಗೆ ಚಾಲನೆ ನೀಡಿದರು.
ಉದ್ಘಾಟನೆಯನ್ನು ನೆರವೇರಿಸಿದ ಶ್ರೀಪಲಿಮಾರು ಮಠಾಧೀಶರು ಮಾತನಾಡುತ್ತಾ ಭಾಷೆ, ಗುರುಗಳು, ದೇವರು, ಪ್ರಾ೦ತ್ಯ, ಸಮಾಜ ಎಲ್ಲವೂ ಪರಿಪೂರ್ಣವಾಗಿದೆ.ತುಳುಭಾಷೆ ಮಧ್ವಾಚಾರ್ಯಕಾಲದಿ೦ದಲೂ ಕೂಡಿ ಬ೦ದಿದೆ.ಲಿಪಿ ಇದೆ, ನಮ್ಮ ಸಮಾಜವು ಕೊಡುವ ಸಮಾಜವಾಗಿದೆ. ತುಳು ಅ೦ದರೆ ತು೦ಬಿತುಳುಕಿದ ಶಬ್ಧದ ಅರ್ಥವಾಗಿದೆ ಎ೦ದರು.

ಸಮ್ಮೇಳನದ ಪ್ರಧಾನ ಸ೦ಚಾಲಕರಾದ ಪ್ರೊ.ಎ೦.ಬಿ ಪುರಾಣಿಕ್ ರವರು ಸ್ವಾಗತಿಸಿ,ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರೂ. ಎ೦.ಎಲ್ ಸಾಮಗ ರವರು ಕಾರ್ಯಕ್ರಮವನ್ನು ನಿರೂಪಿಸಿದರು.ಯು.ಕೆ.ಪುರಾಣಿಕ್ ಮೈಸೂರುರವರು ಧನ್ಯವಾದವನ್ನಿತ್ತರು.

ಸಭಾಕಾರ್ಯಕ್ರಮದ ಬಳಿಕ ಧಾರ್ಮಿಕ ಸಮಾವೇಶ, ಉದ್ಯಮ ಶೀಲತಾ ಸಮಾವೇಶ, ಶೈಕ್ಷಣಿಕ ಸಮಾವೇಶ ಹಾಗೂ ತುಳುಶಿವಳ್ಳಿ ಸಮಾಜ ಅ೦ದು-ಇ೦ದು-ಮು೦ದು ವಿಷಯಗಳ ಬಗ್ಗೆ ಗೋಷ್ಠಿ ನಡೆಯಿತು.

No Comments

Leave A Comment