Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

2019 ಗೂಗಲ್ ಹುಡುಕಾಟ: ಅಭಿನಂದನ್ ಟಾಪ್, ಲತಾ ಮಂಗೇಶ್ವರ್ ನಂಬರ್ -2 ಸ್ಥಾನ!

ನವದೆಹಲಿ: ಈ ವರ್ಷದ ಗೂಗಲ್ ಇಂಡಿಯಾ ಹುಡುಕಾಟದಲ್ಲಿ ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಎರಡನೇ ಸ್ಥಾನದಲ್ಲಿದ್ದಾರೆ

ಭಾರತೀಯ ವಾಯುಪಡೆ ಕಮಾಂಡರ್ ಅಭಿನಂದನ್ ವರ್ತಮಾನ್ ಮೊದಲ ಸ್ಥಾನದಲ್ಲಿದ್ದರೆ, ಲತಾ ಮಂಗೇಶ್ಕರ್ ಎರಡನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಗೂಗಲ್ ಹುಡುಕಾಟದಲ್ಲಿ  ಇವರಿಬ್ಬರ ವ್ಯಕ್ತಿತ್ವದ ಬಗ್ಗೆ ಹೆಚ್ಚಾಗಿ ಹುಡುಕಾಟ ನಡೆಸಲಾಗಿದೆ.

ಎದೆ ಸೋಂಕು ಹಾಗೂ ಉಸಿರಾಟದ ತೊಂದೆರೆಯಿಂದ ಲತಾ ಮಂಗೇಶ್ಕರ್ ಇತ್ತೀಚಿಗೆ ಮುಂಬೈಯಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು.

ಡಿಸೆಂಬರ್ 8ರಂದು 90 ವರ್ಷದ ಗಾಯಕಿ ಮತ್ತೆ ಅರೋಗ್ಯದಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.   1942ರಲ್ಲಿ ವೃತ್ತಿ ಜೀವನ ಆರಂಭಿಸಿದ ಲತಾ ಮಂಗೇಶ್ಕರ್, ಭಾರತ ರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ, ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

No Comments

Leave A Comment