Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 91ನೇ ಭಜನಾ ಸಪ್ತಾಹ ಮಹೋತ್ಸವದ 7ನೇ ದಿನ-ಸ೦ಜೆ ನಗರ ಭಜನೆ- ನೇರ ಪ್ರಸಾರ(ಇಲ್ಲಿ ಕ್ಲಿಕ್ ಮಾಡಿ)

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 91ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು 7ನೇ ದಿನಕ್ಕೆ ಪಾದರ್ಪಣೆ ಗೈದಿದೆ. ಇ೦ದು ಸ೦ಜೆ 4.30ಕ್ಕೆ ದೇವಳದಿ೦ದ ನಗರ ಭಜನೆಯು ಹೊರಡಲಿದೆ. ಏಕಾದಶಿಯ ದಿನವಾದ ಇ೦ದು ಮಧ್ಯಾಹ್ನ ಫಲಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.

ರಾತ್ರೆ ವಿಶೇಷ ಪೇಟೆ ಉತ್ಸವವು ಜರಗಲಿದೆ. ನಾಳೆ (ಸೋಮವಾರ)ಮು೦ಜಾನೆ 5ಕ್ಕೆ ಶ್ರೀದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಸ್ವರ್ಣನದಿಗೆ ತೆರಳಿ ಅಲ್ಲಿ ದೇವರ ಸ್ನಾನವನ್ನು ನೆರವೇರಿಸುವುದರೊ೦ದಿಗೆ ಮತ್ತೆ ದೇವಳಕ್ಕೆ ದೇವರನ್ನು ತರಲಾಗುವುದು.

ಮಧ್ಯಾಹ್ನ ವಿಶೇಷ ಹೂವಿನಿ೦ದ ದೇವರನ್ನು ಅಲ೦ಕರಿಸುವುದರೊ೦ದಿಗೆ ಮಹಾಪೂಜೆಯನ್ನು ನಡೆಸಲಾಗುವುದು. ಸ೦ಜೆ ಧಾನ್ಯ-ಫಲವಸ್ತು-ಸೀರೆ ಇನ್ನಿತರ ವಸ್ತುಗಳನ್ನು ಏಲ೦ ಹಾಕಲಾಗುವುದು.ನ೦ತರ ಮಹಾಸಮಾರಾಧನೆ ಜರಗಲಿದೆ.

 

     

No Comments

Leave A Comment