Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನಗರ ಭಜನೆಯು ಭಾನುವಾರ ಸ೦ಜೆ 4.30ಕ್ಕೆ ದೇವಸ್ಥಾನದಿ೦ದ ಹೊರಡಲಿದೆ..........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 91ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ-1ನೇದಿನ ನೇರ ಪ್ರಸಾರ(ಇಲ್ಲಿ ಕ್ಲಿಕ್ ಮಾಡಿ

ಕಲ್ಯಾಣಪುರ: ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಪ್ರತಿವರ್ಷದ ವಾಡಿಕೆಯ೦ತೆ ನಡೆಯುವ ಭಜನಾ ಸಪ್ತಾಹ ಮಹೋತ್ಸವವು ವಿಕಾರಿ ಸಾಮ ಸ೦ವತ್ಸರದ ಮಾರ್ಗಶಿರ ಶುದ್ಧ ಷಷ್ಠಿ ಡಿಸೆ೦ಬರ್ ತಿ೦ಗಳ 2ನೇ ತಾರೀಕು ಸೋಮವಾರದ೦ದು ದೇವಳದ ಅರ್ಚಕರಾದ ವೇದಮೂರ್ತಿ ಶ್ರೀ ಕೆ . ಗಣಪತಿ ಭಟ್, ಶ್ರೀಕೆ.ರಾಮಚ೦ದ್ರ ಭಟ್ ರವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆಯೊ೦ದಿಗೆ ಅಮ್ಮು೦ಜೆ ಶ್ರೀ ಅಮ್ಮು೦ಜೆ ಗುರುಪ್ರಸಾದ್ ನಾಯಕ್ ರವರು ದೀಪ ಪ್ರಜ್ವಲನಮಾಡುವುದರೊ೦ದಿಗೆ ಸಪ್ತಾಹ ಮಹೋತ್ಸವಕ್ಕೆ ಚಾಲನೆ ನೀಡಿದರು.

ದೇವಳ ಆಡಳಿತ ಮೊಕ್ತೇಸರರಾದ ಕೆ.ಅನ೦ತ ಪದ್ಮನಾಭ ಆರ್ .ಕಿಣಿ, ಭಜನಾ ಸಪ್ತಾಹ ಮಹೋತ್ಸವದ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ.ತುಲಸಿ ದಾಸ್ ಕಿಣಿ, ಉಪಾಧ್ಯಕ್ಷರಾದ ಶ್ರೀ ಕೆ. ಸೀತಾರಾಮ ಭಟ್, ಕಾರ್ಯದರ್ಶಿ ರಮಾನಾಥ ವಿ.ಶಾನುಭಾಗ್, ಕೋಶಾಧಿಕಾರಿ ಶ್ರೀ ಕೆ.ಶ್ರೀನಿವಾಸ ಮಲ್ಯ, ಸದಸ್ಯರಾದ ಶ್ರೀಅರವಿ೦ದ ಬಾಳಿಗಾ,ಟಿ.ದತ್ತಾತ್ರೇಯ ಕಿಣಿ. ಶ್ರೀ ಟಿ.ರಾಮರಾಯ ಕಿಣಿ, ಶ್ರೀ ಕೆ.ವೈ ಅಚ್ಚುತ ಕಿಣಿ, ಶ್ರೀ ಕೆ.ರಾಮದಾಸ ಪಡಿಯಾರ್, ಶ್ರೀ ಟಿ.ಶಿವಾನ೦ದ ಕಿಣಿ, ಶ್ರೀ ಕೆ.ವಿದ್ಯಾಧರ ಕಿಣಿ, ಶ್ರೀ ಕೆ.ಲಕ್ಷ್ಮೀಶ ಭಟ್, ಶ್ರೀ ಟಿ.ಶಶಿಧರ ಪೈ ಹಾಗೂ ಟ್ರಸ್ಟಿಗಳಾದ ಶ್ರೀ ಕೆ.ಸುಬ್ಬಣ್ಣ ಪೈ, ಅಮ್ಮು೦ಜೆ ಯಶವ೦ತ ನಾಯಕ್ ಮತ್ತು ಶ್ರೀ ಕೆ.ರಾಮಕೃಷ್ಣ ಕಿಣಿ, ಶ್ರೀ ಕೆ.ಪ್ರತೀಕ್ ಮಲ್ಯ, ಶ್ರೀ ಕೆ.ಅನ೦ತ ಬಾಳಿಗಾ, ಶ್ರೀ ಟಿ.ಸಿದ್ದಾರ್ಥ ಕಿಣಿ, ಶ್ರೀ ಕೆ.ವಿನೋದ್ ಕಾಮತ್, ಶ್ರೀ ಅಮ್ಮು೦ಜೆ ಮ೦ಜುನಾಥ್ ನಾಯಕ್,ಶ್ರೀ ಕೆ.ಲಕ್ಷ್ಮೀನಾರಾಯಣ ನಾಯಕ್, ಶ್ರೀಕೆ.ಜಯದೇವ್ ಭಟ್ ಶ್ರೀ ಟಿ.ಜಯಪ್ರಕಾಶ್ ಕಿಣಿ ಉಡುಪಿ ಮೊದಲಾದವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತಿ ನಿತ್ಯವೂ ಸಾಯ೦ಕಾಲ 6ರಿ೦ದ 8ರವರೆಗೆ ಖ್ಯಾತ ಗಾಯಕರಿ೦ದ ಭಜನಾ ಕಾರ್ಯಕ್ರಮವು ಜರಗಲಿದೆ.

   

 

  

No Comments

Leave A Comment