Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ವಿಮಾನ ಪತನ: ಇಬ್ಬರು ಮಕ್ಕಳು, ಪೈಲಟ್ ಸೇರಿ 9 ಮಂದಿ ದಾರುಣ ಸಾವು

ಸೌತ್ ಡಕೋಟಾ: ವಿಮಾನ ಪತನವಾಗಿ ಎರಡು ಮಕ್ಕಳು ಸೇರಿದಂತೆ ಒಂಬತ್ತು ಜನರು  ಮೃತಪಟ್ಟ ಘಟನೆ ಅಮೇರಿಕಾದ ಸೌತ್ ಡಕೋಟಾದಲ್ಲಿ ನಡೆದಿದೆ.

ಪಿಲಾಟಸ್ ಪಿಸಿ-12  ವಿಮಾನ ಟೇಕಾಫ್ ಆದ ಕೆಲ ಸಮಯದಲ್ಲೇ ಪತನವಾಗಿದೆ. ವರದಿಯ ಪ್ರಕಾರ ಶನಿವಾರ ಮಧ್ಯಾಹ್ನ 12:30 ಸಮಯದಲ್ಲಿ ಅಪಘಾತವಾಗಿದೆ. ಈ ವಿಮಾನವು ಚೆಂಬರ್ಲೇನ್ ನಿಂದ ಸಿಯೋಕ್ಸ್ ಫಾಲ್ಸ್ ನ ಪಶ್ಚಿಮಕ್ಕೆ ಹೊರಟಿತ್ತು.

ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ವಿಮಾನದಲ್ಲಿ 12 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನುಕೂಲಕರವಲ್ಲದ  ಹವಾಮಾನದ ಹಿನ್ನೆಲೆಯಲ್ಲಿ  ಈ ದುರಂತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

No Comments

Leave A Comment