Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನಗರ ಭಜನೆಯು ಭಾನುವಾರ ಸ೦ಜೆ 4.30ಕ್ಕೆ ದೇವಸ್ಥಾನದಿ೦ದ ಹೊರಡಲಿದೆ..........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

2019-20ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ-ಮಾರ್ಚ್ 27ರಿಂದ ಏಪ್ರಿಲ್ 9ರ ತನಕ

ಬೆಂಗಳೂರು:  2019-20ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ  ಪ್ರಕಟಿಸಿದೆ.

ಮಾರ್ಚ್ 27ರಿಂದ ಏಪ್ರಿಲ್ 9ರ ತನಕ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆ ನಡೆಯಲಿದ್ದು, ಈ ಸಂಬಂಧ ಅಧಿಕೃತ ವೇಳಾಪಟ್ಟಿಯನ್ನು ಮಂಡಳಿ ತನ್ನ ಅಧಿಕೃತ ವೆಬ್ ಸೈಟ್‌ನಲ್ಲಿ ಪ್ರಕಟಿಸಿದೆ.

ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30/45ರವೆಗೆ ಮತ್ತು ಕೆಲವು ಪರೀಕ್ಷೆಗಳು ಮಧ್ಯಾಹ್ನ 2 ರಿಂದ 5.15 ರವರೆಗೆ ನಡೆಯಲಿದೆ.

ಪರೀಕ್ಷಾ ವೇಳಾಪಟ್ಟಿ ಹೀಗಿದೆ

ಮಾರ್ಚ್​ 27– ಪ್ರಥಮ ಭಾಷೆ

ಮಾರ್ಚ್  30 –  (ಕೋರ್ ಸಬ್ಜೆಕ್ಟ್​) ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ

ಏಪ್ರಿಲ್ 01 – ದ್ವಿತೀಯ ಭಾಷೆ

ಏಪ್ರಿಲ್ 03- ತೃತೀಯ ಭಾಷೆ  ಎನ್​ಎಸ್​ಕ್ಯೂಎಫ್​ ಪರೀಕ್ಷಾ ವಿಷಯಗಳು

ಏಪ್ರಿಲ್ 04  ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್​-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ

ಏಪ್ರಿಲ್ 07-  ಗಣಿತ, ಸಮಾಜಶಾಸ್ತ್ರ

ಏಪ್ರಿಲ್ 09-  ಸಮಾಜ ವಿಜ್ಞಾನ

ಹೆಚ್ಚಿನ ಮಾಹಿತಿಗಾಗಿ http://kseeb.kar.nic.in/index.asp ಲಾಗಿನ್ ಆಗಬಹುದಾಗಿದೆ.

No Comments

Leave A Comment