Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಸೇತುವೆಯಿಂದ ಕೆಳಕ್ಕುರುಳಿದ ಪಿಕಪ್ – 7 ಜನ ಸಾವು , 24 ಜನರಿಗೆ ಗಾಯ

ಮಹಾರಾಷ್ಟ್ರ: ಮಹಾರಾಷ್ಟ್ರದ ಧುಲೆ ಜಿಲ್ಲೆಯ ವಿಂಚೂರ್ ಗ್ರಾಮದಲ್ಲಿ ಪಿಕಪ್ ವಾಹನವೊಂದು ಸೇತುವೆಯಿಂದ ಕೆಳಕ್ಕೆ ಉರುಳಿ 7 ಜನ ಸಾವನ್ನಪ್ಪಿದ್ದು , 24 ಮಂದಿ ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ 12.30 ರ ವೇಳೆಗೆ ನಡೆದಿದೆ.

ಅಪಘಾತಕ್ಕೆ ಒಳಗಾದ 24 ಜನರಲ್ಲಿ ಐವರ ಸ್ಥಿತಿ ಗಂಬೀರವಾಗಿದೆ ಎಂದು ವರದಿಯಾಗಿದೆ. ವಿಂಚೂರ್​ ಗ್ರಾಮದಲ್ಲಿರುವ ಭೋರಿ ನದಿ ಮೇಲೆ ಸಾಗುತ್ತಿದ್ದ ಪಿಕಪ್​ ವಾಹನ ಸೇತಿವೆಯಿಂದ ಕೆಳಕ್ಕೆ ಉರುಳಿದೆ. ಗಾಯಾಳುಗಳನ್ನೆಲ್ಲಾ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಹನದಲ್ಲಿದ್ದವರು ಮಧ್ಯಪ್ರದೇಶದ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ಧುಲೆಯಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಕಬ್ಬು ಕಟಾವು ಮಾಡಲೆಂದು ಪರಿವಾರ ಸಮೇತ ಗುಳೆ ಬಂದಿದ್ದರು ಎನ್ನಲಾಗಿದೆ.

No Comments

Leave A Comment