Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನಗರ ಭಜನೆಯು ಭಾನುವಾರ ಸ೦ಜೆ 4.30ಕ್ಕೆ ದೇವಸ್ಥಾನದಿ೦ದ ಹೊರಡಲಿದೆ..........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

‘’ನಾಳೆ ನಿಮ್ಮ ಮನೆಗೆ ದಾಳಿ ನಡೆಯಲಿದೆ’’: ಸಿಬಿಐ ಅಧಿಕಾರಿಯ ಸೋಗಿನಲ್ಲಿ ಚಿನ್ನಾಭರಣ ಲೂಟಿ

ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ವ್ಯಾಪಾರಿಯನ್ನು ಯಾಮಾರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಜರುಗಿದೆ.

ಎಪಿಎಂಸಿ ವ್ಯಾಪರಸ್ಥರೂ ಆಗಿರುವ ಅರ್ಬನ್ ಬ್ಯಾಂಕ್ ನಿರ್ದೇಶಕ ಷಣ್ಮುಖ ಸಂಗಮ ಅವರು ಸಿಂದಗಿ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಹೋಗುತ್ತಿದ್ದಾಗ ಸೈನ್ ಬೈಕ್‌ ಮೇಲೆ ಎದುರಿಗೆ ಬಂದ ಅನಾಮಿಕ ವ್ಯಕ್ತಿಯೊಬ್ಬ ತಾನು ಸಿಬಿಐ ಅಧಿಕಾರಿ ಎಂದು ಗುರುತಿನ ಚೀಟಿ ತೋರಿಸಿ ಪರಿಚಯಿಸಿಕೊಂಡಿದ್ದಾನೆ.

ಅಲ್ಲದೇ ನಿಮ್ಮ ಮನೆಗೆ ಸಿಬಿಐ ದಾಳಿ ನಡೆಯಲಿದೆ, ಎರಡು ದಿನ‌ ಚಿನ್ನಾಭರಣ ಧರಿಸಬೇಡಿ ಎಂದು ಹೇಳಿದ್ದಾನೆ.  ಅಲ್ಲದೇ ಷಣ್ಮುಖ ಅವರು ಧರಿಸಿದ್ದ ಸುಮಾರು 1.30 ಲಕ್ಷ ರೂಪಾಯಿ ಮೌಲ್ಯದ 30 ಗ್ರಾಂ ತೂಕದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ಲಾಕೆಟ್, ಎರಡು ಉಂಗುರ ಚಿನ್ನಾಭರಣಗಳನ್ನು ಪಡೆದು, ಕರವಸ್ತ್ರದಲ್ಲಿ ಸುತ್ತಿಕೊಂಡು, ಎರಡು ದಿನ ಬಂಗಾರ ಹಾಕಿಕೊಳ್ಳಬೇಡಿ ಎಂದು ಹೇಳಿದ್ದಾನೆ. ಅಲ್ಲದೇ ಷಣ್ಮುಖ ಅವರ ಕಣ್ತಪ್ಪಿಸಿ ಚಿನ್ನಾಭರಣ ಇಲ್ಲದ ಮತ್ತೊಂದು ಕರವಸ್ತ್ರವನ್ನು ಷಣ್ಮುಖ ಅವರ ಕೈಯಲ್ಲಿ ಕೊಟ್ಟು ಪರಾರಿಯಾಗಿದ್ದಾನೆ.

ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

No Comments

Leave A Comment