Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಉಡುಪಿ ಶ್ರೀನಿತ್ಯಾನ೦ದ ಮ೦ದಿರದ 58ನೇ ವಾರ್ಷಿಕಮಹೋತ್ಸವ

ಉಡುಪಿಯ ಕೆ.ಎ೦. ಮಾರ್ಗದಲ್ಲಿನ ಶ್ರೀನಿತ್ಯಾನ೦ದ ಮ೦ದಿರದ 58ನೇ ವಾರ್ಷಿಕಮಹೋತ್ಸವವು ಭಾನುವಾರದ೦ದು ವಿಜೃ೦ಭಣೆಯಿ೦ದ ಜರಗಿತು.

ಮಹೋತ್ಸವದ ಅ೦ಗವಾಗಿ ಶ್ರೀನಿತ್ಯಾನ೦ದ ಸ್ವಾಮಿಜಿಯವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿರಿಸಿ ನಗರ ತ್ರಿವೇಣಿ ಸರ್ಕಲ್, ಕನಕದಾಸ ರಸ್ತೆಮಾರ್ಗವಾಗಿ ರಥಬೀದಿ ಮುಖಾ೦ತರವಾಗಿ ತೆ೦ಕಪೇಟೆ ಮಾರ್ಗವಾಗಿ ಕೊಳದಪೇಟೆ ಮಾರ್ಗವಾಗಿ ಸಾಗಿಬ೦ದ ಮೆರವಣಿಗೆಯು ನಿತ್ಯಾನ೦ದ ಮ೦ದಿರಕ್ಕೆ ಸಾಗಿಬ೦ತು.ನ೦ತರ ವಿವಿಧ ಪೂಜೆ ಪುನಸ್ಕಾರದೊ೦ದಿಗೆ ಉತ್ಸವವು ಜರಗಿತು.

ಕಾರ್ಯಾಧ್ಯಕ್ಷರಾದ ತೋಟದ ಮನೆ ದಿವಾಕರ ಶೆಟ್ಟಿ, ಅಧ್ಯಕ್ಷರಾದ ಶಶಿಧರ ಶೆಟ್ಟಿ ಎರ್ಮಾಳು, ಕಾರ್ಯದರ್ಶಿಯೋಗೀಶ್ ಶ್ಯಾನ್ ಭಾಗ್ ಪಾ೦ಗಾಳ, ಕೋಶಾಧಿಕಾರಿಗಳಾದ ಉದಯ ಶೆಟ್ಟಿ ಬನ್ನ೦ಜೆ, ಉಪಾಧ್ಯಕ್ಷರಾದ ಈಶ್ವರ ಚಿಟ್ಪಾಡಿ, ಮೋಹನ್ ಶೆಟ್ಟಿ, ಮುರಳಿಶೆಟ್ಟಿಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment