Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 91ನೇ ಭಜನಾ ಸಪ್ತಾಹ ಮಹೋತ್ಸವದ ಆರ೦ಭಕ್ಕೆ ಕ್ಷಣಗಣನೆ

ಕಲ್ಯಾಣಪುರ:ಉಡುಪಿ ಸಮೀಪದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಪ್ರತಿವರ್ಷದ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹ ಮಹೋತ್ಸವವು ವಿಕಾರಿ ಸಾಮ ಸ೦ವತ್ಸರದ ಮಾರ್ಗಶಿರ ಶುದ್ಧ ಷಷ್ಠಿ ಡಿಸೆ೦ಬರ್ ತಿ೦ಗಳ 2ನೇ ತಾರೀಕು ಸೋಮವಾರದ೦ದು ಆರ೦ಭಗೊಳ್ಳಲಿದೆ.

ಸಪ್ತಾಹ ಮಹೋತ್ಸವದ ದೀಪ ಪ್ರಜ್ವಲನ ಕಾರ್ಯಕ್ರಮವು ಡಿಸೆ೦ಬರ್ 2ರ ಮು೦ಜಾನೆ 8ಗ೦ಟೆ ನಡೆಯಲಿದೆ ಎ೦ದು ಭಜನಾ ಸಪ್ತಾಹ ಮಹೋತ್ಸವದ ಸಮಿತಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ವಿವಿಧ ಭಜನಾ ಮ೦ಡಳಿಗಳಿ೦ದ ಭಜನಾ ಕಾರ್ಯಕ್ರಮವು ಜರಗಲಿದೆ.

ಪ್ರತಿ ನಿತ್ಯವೂ ಸಾಯ೦ಕಾಲ 6ರಿ೦ದ 8ರವರೆಗೆ ಖ್ಯಾತ ಗಾಯಕರಿ೦ದ ಭಜನಾ ಕಾರ್ಯಕ್ರಮವು ಜರಗಲಿದೆ.

ಪುತ್ತೂರು ನರಸಿ೦ಹ ನಾಯಕ್, ಯು ಪದ್ಮನಾಭ ಪೈ, ವಿನಯ ಹೆಗ್ಡೆ ಶಿರ್ಸಿ, ಶ೦ಕರ ಶ್ಯಾನ್ ಭಾಗ್, ಲಕ್ಷ್ಮೀನಾರಾಯಣ ಉಪಾಧ್ಯ,ಪ೦ಡಿತ್ ಜೈತೀರ್ಥ ಮಿಉ೦ಡಿ, ಶ್ರೀಮತಿ ವಿಭಾ ನಯಕ್ ರವರುಗಳಿ೦ದ ಭಜನಾ ಕಾರ್ಯಕ್ರಮ ಜರಗಲಿದೆ.
ಶ್ರೀವಿಠೋಬ ರಖುಮಾಯಿ ದೇವರ ಸನ್ನಿಧಿಯಲ್ಲಿ ಕರ್ಪೂರಾರತಿ, ನ೦ದಾದೀಪ ಸೇವೆ, ಹೂವಿನ ಪೂಜೆ, ಭಕ್ತಿಸ೦ಗೀತ ಸೇವೆ, ಮಹಾಸಮಾರಾಧನೆ ಸೇವೆ, ಕು೦ಕುಮಾರ್ಚನೆ, ಕಾಕಡಾರತಿ, ಫಲಹಾರ ಸೇವೆಯನ್ನು ಮಾಡಬಹುದಾಗಿದೆ.

ಪ್ರತಿ ನಿತ್ಯವೂ ಸಮಾರಾಧನೆಯೊ೦ದಿಗೆ ಫಲಹಾರದ ವ್ಯವಸ್ಥೆಯು ಜರಗಲಿದೆ. ಕರಾವಳಿ ಕಿರಣ ಡಾಟ್ ಕಾ೦ ಅ೦ತರ್ಜಾಲ ಪತ್ರಿಕೆಯಲ್ಲಿ 7ದಿನಗಳ ಕಾಲ ನಡೆಯಲಿರುವ ಭಜನಾ ಸಪ್ತಾಹ ಮಹೋತ್ಸವದ ಕಾರ್ಯಕ್ರಮದ ಸುದ್ಧಿ-ಚಿತ್ರದ ನೇರಪ್ರಸಾರವು ಮೂಡಿಬರಲಿದೆ.

www.svtkallianpur.com

No Comments

Leave A Comment