Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಕನಕದಾಸರು ಇಂದಿಗೂ ಪ್ರಸ್ತುತ- ಜಿಲ್ಲಾಧಿಕಾರಿ ಜಗದೀಶ್

ಉಡುಪಿ:ಕನಕದಾಸರ ಕೀರ್ತನೆಗಳು, ತತ್ವಗಳನ್ನು ಅರಿಯವುದರ ಮೂಲಕ ಸಮಾಜದಲ್ಲಿ ಎಲ್ಲಾ ಸಮುದಾಯಗಳ ಜನರು ಶಾಂತಿ ಸಹಬಾಳ್ವೆಯಿಂದ ಬಾಳಲು ಸಾದ್ಯವಿದೆ, ಈ ಮೂಲಕ 500 ವರ್ಷಗಳ ಹಿಂದೆ ಜನಿಸಿದ ಕನಕದಾಸರು ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.

ಅವರು ಶುಕ್ರವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ , ಜಿಲ್ಲಾಧಿಕರಿ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ , ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಹಿಂದುಳಿದ ವರ್ಗದಲ್ಲಿ ಜನಿಸಿದ ಕನಕದಾಸರು ಇಡೀ ಮಾನವ ಕುಲದ ಸುಧಾರಣೆಗೆ ಪ್ರಯತ್ನಿಸಿದ್ದು ನೆನದರೆ ರೋಮಾಂಚನವಾಗುತ್ತದೆ, ಕುಲ ಕುಲವೆಂದು ಹೊಡೆದಾಡದಿರಿ ಎಂಬ ಅವರ ಕೀರ್ತನೆ ಇಡೀ ಮಾನವ ಸಮಾಜವನ್ನೇ ತಿದ್ದಿ, ಸರಿಯದ ಹಾದಿಯಲ್ಲಿ ಮುನ್ನಡೆಸಲಿದೆ, ಕನಕದಾಸರ ಕೀರ್ತನೆಗಳು, ಮಂಡಿಗೆಗಳು ಮಾನವ ಜೀವನ ಹೇಗೆ ಸರಿಯಾದ ದಾರಿಯಲ್ಲಿ ನಡೆಯಬೇಕು ಎನ್ನುವುದನ್ನು ತಿಳಿಸುತ್ತವೆ, ಅವರ ಚಿಂತನೆ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದರು.

ಕನಕದಾಸರು ಜನಿಸಿದ ಜಿಲ್ಲೆಯಲ್ಲಿಯೇ ನಾನು ಮೊದಲು ಎಸಿ ಯಾಗಿ ಕರ್ತವ್ಯ ನಿರ್ವಹಿಸಿದ್ದು, ಹಾವೇರಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ , ನಂತರ ಕನಕರಿಗೆ ಸಂಬಂದವಿರುವ ಉಡುಪಿ ಜಿಲ್ಲೆಯಲ್ಲಿಯೇ ಜಿಲ್ಲಾಧಿಕಾರಿಯಾಗಿದ್ದೇನೆ, ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದ ಕಾರ್ಯದಲ್ಲಿ ಸಹ ಕರ್ತವ್ಯ ನಿರ್ವಹಿದ್ದೇನೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದರು.

ಕನಕದಾಸರ ಕುರಿತು ಉಪನ್ಯಾಸ ನೀಡಿದ ನಿವೃತ ಉಪನ್ಯಾಸಕ ಮೇಟಿ ಮುದಿಯಪ್ಪ, ದಾಸರಲ್ಲಿ ಶ್ರೇಷ್ಠರಾದ ಕನಕದಾಸರು ಒಬ್ಬ ರಾಷ್ಟ್ರ ಸಂತರು, ಅವರ ಕೀರ್ತನೆಗಳು ಗ್ರಾಮೀಣ ಜನತೆಗೂ ಸಹ ಸುಲಭದಲ್ಲಿ ಅಥ್ವಾಗುತ್ತದೆ ಆದರೆ ಅದರ ಮುಂಡಿಗೆಗಳು ಗೂಡಾರ್ಥದಿಂದ ಕೂಡಿವೆ, ಜಾತಿ, ಮತ, ವೈಯಕ್ತಿಕ ಪ್ರತಿಷ್ಠೆಗಳು ಮಾನವನ ಅಹಂಕಾರಕ್ಕೆ ಕಾರಣ ಎನ್ನುವುದನ್ನು ತಿಳಿಸಿದ ಇವರು, ಮುನುಕುಲದ ಉನ್ನತೀಖರಣಕ್ಕೆ ಪ್ರಯತ್ನಿಸಿದ್ದು, ದೇವರನ್ನು ಎಲ್ಲಿಯೋ ಹುಡುಕಬೇಕಿಲ್ಲ , ಮಾನವನ ಒಳಗಣ್ಣು ತೆರೆದರೆ ಭಗವಂತ ಕಾಣುತ್ತಾನೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ,ಮೇಟಿ ಮುದಿಯಪ್ಪ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು, ಪೂರ್ಣಿಮಾ ವಂದಿಸಿದರು.

No Comments

Leave A Comment