Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಕಟಪಾಡಿ: ಮೀನು ಸಾಗಾಟ ವಾಹನ ಪಲ್ಟಿ; ಹೆದ್ದಾರಿಯುದ್ದಕ್ಕೂ ಚೆಲ್ಲಾಡಿದ ಕಾರ್ಗಿಲ್ ಮೀನುಗಳು

ಕಟಪಾಡಿ: ಮೀನು ಸಾಗಾಟದ ಟಾಟಾ ಏಸ್ ವಾಹನವೊಂದು ಟಯರ್ ಸ್ಪೋಟಗೊಂಡು  ಪಲ್ಟಿಯಾದ ಪರಿಣಾಮ ಕಾರ್ಗಿಲ್ ಮೀನುಗಳು ಹೆದ್ದಾರಿಯುದ್ದಕ್ಕೂ ಚೆಲ್ಲಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

ಇಂದು ಮುಂಜಾನೆ ಮಂಗಳೂರಿನಿಂದ ಉಡುಪಿಯತ್ತ ತೆರಳುತ್ತಿದ್ದ ಟಾಟಾ ಏಸ್ ವಾಹನ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಿರುವು ಹೆದ್ದಾರಿ 66 ರ ಸಮೀಪ  ಪಲ್ಟಿಯಾಗಿದೆ. ಪರಿಣಾಮವಾಗಿ ಕಾರ್ಗಿಲ್ ಮೀನುಗಳು ಹೆದ್ದಾರಿಯುದ್ದಕ್ಕೂ ಚೆಲ್ಲಾಡಿವೆ.

ಟಾಟಾ ಏಸ್ ವಾಹನ ಜಖಂಗೊಂಡಿದ್ದು, ಹೆದ್ದಾರಿಯುದ್ದಕ್ಕೂ ಚೆಲ್ಲಿ ಬಿದ್ದ ಕಾರ್ಗಿಲ್ ಮೀನುಗಳನ್ನು ತೆರವುಗೊಳಿಸಲಾಗುತ್ತಿದೆ.

No Comments

Leave A Comment