Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ನೀತಾ ಅಂಬಾನಿ ಮುಡಿಗೆ ಮತ್ತೊಂದು ಗರಿ: ನ್ಯೂಯಾರ್ಕ್ ನ ‘ದ ಮೆಟ್’ಮ್ಯೂಸಿಯಂನ ಟ್ರಸ್ಟಿ

ನ್ಯೂಯಾರ್ಕ್: ಅಮೆರಿಕಾದ ಬಹುದೊಡ್ಡ ಕಲಾಕೇಂದ್ರವೆನಿಸಿರುವ ನ್ಯೂಯಾರ್ಕ್ ನ ಮೆಟ್ರೊಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್ ಗೆ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಗೌರವಾನ್ವಿತ ಟ್ರಸ್ಟಿಯಾಗಿ ಆಯ್ಕೆಯಾಗಿದ್ದಾರೆ.

ವಸ್ತು ಸಂಗ್ರಹಾಲಯದ ಅಧ್ಯಕ್ಷ ಡೇನಿಯಲ್ ಬ್ರಾಡ್ಸ್ಕಿ, ಮೆಟ್ರೊಪಾಲಿಟನ್ ಕಲಾ ವಸ್ತು ಸಂಗ್ರಹಾಲಯದ ಮೇಲೆ ನೀತಾ ಅಂಬಾನಿ ತೋರಿಸುತ್ತಿರುವ ಬದ್ಧತೆ ಮತ್ತು ಭಾರತದ ಕಲೆ, ಸಂಸ್ಕೃತಿಯನ್ನು ಪ್ರಚುರಪಡಿಸುವಲ್ಲಿ ನೀತಾ ಅಂಬಾನಿಯವರು ತೋರಿಸುತ್ತಿರುವ ಕಾಳಜಿ ನಿಜಕ್ಕೂ ಅದ್ಬುತವಾಗಿದೆ. ಅವರ ಬೆಂಬಲದಿಂದಾಗಿ ವಸ್ತು ಸಂಗ್ರಹಾಲಯದಲ್ಲಿ ದೇಶದ ವಿವಿಧ ಮೂಲೆಮೂಲೆಗಳ ಕಲೆ, ಸಂಸ್ಕೃತಿಗಳನ್ನು ಅಧ್ಯಯನ ಮಾಡಿ ಅವುಗಳನ್ನು ಪ್ರದರ್ಶಿಸಲು ಸಹಾಯಕವಾಗಿದೆ ಎಂದು ಹೇಳಿದ್ದಾರೆ.

ದ ಮೆಟ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ವಸ್ತು ಸಂಗ್ರಹಾಲಯ ಅಮೆರಿಕದಲ್ಲಿ ಪ್ರಪಂಚದ ಹಲವು ಪ್ರದೇಶಗಳ 5 ಸಾವಿರಕ್ಕೂ ಹೆಚ್ಚು ವರ್ಷಗಳ ಕಲೆಗಳನ್ನು ಬಿಂಬಿಸುವ ಸಾವಿರಾರು ವಸ್ತುಗಳನ್ನು ಪ್ರದರ್ಶಿಸುವ ಬಹುದೊಡ್ಡ ಕಲಾಕೇಂದ್ರವಾಗಿದೆ. ನೀತಾ ಅಂಬಾನಿಯವರ ನಾಯಕತ್ವದಲ್ಲಿ ಇಲ್ಲಿ ಹಲವು ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಸಿಕ್ಕಿದೆ.

No Comments

Leave A Comment