Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಕೆಪಿಎಲ್​ ಮ್ಯಾಚ್​ ಫಿಕ್ಸಿಂಗ್​: ಅಂತಾರಾಷ್ಟ್ರೀಯ ಬುಕ್ಕಿ ಸಯ್ಯಾಂ ಅರೆಸ್ಟ್

ಹರಿಯಾಣ ಮೂಲದ ಸಯ್ಯಾಂ ಓರ್ವ ಅಂತರಾಷ್ಟ್ರೀಯ ಮಟ್ಟದ ಬುಕ್ಕಿಯಾಗಿದ್ದು ಕೆಪಿಎಲ್ ಹಗರಣ ಬೆಳಕಿಗೆ ಬರುತ್ತಿದ್ದಂತೆ ಆತ ವಿದೇಶಕ್ಕೆ ಪರಾರಿಯಾಗಿದ್ದಾನೆ.

ನಿನ್ನೆ ರಾತ್ರಿ ವಿದೇಶದಿಂದ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾನೆ ಎಂಬಖಚಿತ ಮಾಹಿತಿ ಪಡೆದ ಸಿಸಿಬಿ ಅಲ್ಲಿಯೇ ಆತನನ್ನು ಬಂಧಿಸಿದ್ದಾರೆ.

ಫಿಕ್ಸಿಂಗ್‌ ಪ್ರಕರಣ್ಕಕೆ ಸಂಬಂಧಿಸಿ ಹಲವು ರಹಸ್ಯ ಮಾಹಿತಿಗಳು ಸಯ್ಯಾಂ ಬಳಿ ಇದ್ದು ಅಂತರಾಷ್ಟ್ರೀಯ ಆಟಗಾರರೊಡನೆ ಸಹ ಸಂಪರ್ಕ ಹೊಂದಿದ್ದನೆಂಬ ಮಾಹಿತಿ ಇದೆ. ಅಷ್ಟೇ ಅಲ್ಲದೆ ಹಗರಣದ ಪ್ರಮುಖ ಆರೋಪಿತ ಭವೇಶ್ ಬಾಪ್ನ ಜೊತೆ  ಸಹ ಸಯ್ಯಾಂ ನಿಕಟ ಸಂಪರ್ಕ ಹೊಂದಿದ್ದ.

ಇನ್ನು ಹಗರಣದ ತನಿಖೆ ಚುರುಕಾಗಿಸಿರುವ ಸಿಸಿಬಿ ಅಧಿಕಾರಿಗಳು ಇದಾಗಲೇ ಗಾವಿ ಫ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ ತಂಡದ ಕೆಲ ಆತಗಾರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ,

No Comments

Leave A Comment