Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅಕ್ಟೋಬರ್ 26ರ೦ದು ಚ೦ಡಿಕಾ ಹೋಮ ನಡೆಯಲಿದೆ. ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ರಾಮ ಮಂದಿರ ನಿರ್ಮಾಣಕ್ಕೆ ಅಸ್ಸಾಂ ಮುಸ್ಲಿಂ ಸಂಘಟನೆಯಿಂದ 5 ಲಕ್ಷ ರೂಪಾಯಿ!

ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ್ದು, ತೀರ್ಪಿನ ಬಳಿಕ ಹಿಂದೂ-ಮುಸ್ಲಿಮರ ಸೌಹಾರ್ದತೆ ಸಾರುವಂತಹ ಅತ್ಯುತ್ತಮ ಉದಾಹರಣೆಗಳು ಕಂಡುಬರಿತ್ತಿವೆ.

ಮುಸ್ಲಿಮರು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಈ ನಡುವೆ ಅಸ್ಸಾಂ ನ ಮುಸ್ಲಿಂ ಸಂಘಟನೆಯೊಂದು ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದೆ.

ಅಸ್ಸಾಂ ನ ಮುಸ್ಲಿಂ ಸಮುದಾಯಗಳು 21 ಸಂಘಟನೆಗಳನ್ನು ಹೊಂದಿದ್ದು, ಜನಗೋಷ್ಟೀಯ ಸಮನ್ನಯ್ ಎಂಬ ಸಹಕಾರ ಸಮಿತಿಯನ್ನು ಹೊಂದಿದೆ. ಈ ಸಮಿತಿ  ಕೋರ್ಟ್ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದೆ. ಅಷ್ಟೇ ಅಲ್ಲದೇ 5 ಲಕ್ಷ ರೂಪಾಯಿ ಮಂದಿರ ನಿರ್ಮಾಣಕ್ಕಾಗಿ ನೀಡುವುದಾಗಿಯೂ ಹೇಳಿದೆ.

No Comments

Leave A Comment