Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ ಸ೦ಪನ್ನದತ್ತ-ಸಪ್ತಾಹ ಮಹೋತ್ಸವಕ್ಕೆ ಕರಾವಳಿಕಿರಣ ಡಾಟ್ ಕಾ೦ ಬಳಗಕ್ಕೆ ಸಹಕಾರ ನೀಡಿದ ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಸಪ್ತಾಹ ಮಹೋತ್ಸವ ಸಮಿತಿ ಮತ್ತು ದೇವಸ್ಥಾನ ಸಿಬ್ಬ೦ಧಿವರ್ಗದವರಿಗೆ, ಅರ್ಚಕವೃ೦ದಕ್ಕೂ.ಸ್ವಯ೦ಸೇವಕ ಬಳಗಕ್ಕೆ,ಜಿ ಎಸ್ ಬಿ ಯುವಕ ಮ೦ಡಳಿಗೆ ಮತ್ತು ಜಾಹೀರಾತನ್ನು ನೀಡಿದ ಎಲ್ಲಾ ಜಾಹೀರಾತುದಾರರಿಗೆ ಸಮಾಜ ಬಾ೦ಧವರಿಗೆ ನಮ್ಮ ಧನ್ಯವಾದಗಳು ಮು೦ದೆಯು ದೇವಸ್ಥಾನದ ಎಲ್ಲಾ ಕಾರ್ಯಕ್ರಮಕ್ಕೆ ನಾವು ನಿಮ್ಮ ಸಹಕಾರವನ್ನು ಈ ಸ೦ದರ್ಭದಲ್ಲಿ ನಿರೀಕ್ಷಿಸುತ್ತೇವೆ.

ಅಯೋಧ್ಯೆ ತೀರ್ಪು ಪ್ರಕಟ: 1528ರಿಂದ 2019ರವರೆಗೆ, ನ್ಯಾಯಾಲಯದ ನಡಾವಳಿ

ನವದೆಹಲಿ: ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತು 2010ರಲ್ಲಿ ಅಲಹಾಬಾದ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಕುರಿತು ಸುಪ್ರೀಂ ಕೋರ್ಟ್ ಶನಿವಾರ ಐತಿಹಾಸಿಕ ತೀರ್ಪು ನೀಡಿದೆ.ನ್ಯಾಯಾಲಯದಲ್ಲಿ ಇಷ್ಟು ವರ್ಷಗಳ ಕಾಲ ನಡೆದ ಹೋರಾಟದ ಸುದೀರ್ಘ ವಿವರ ಇಲ್ಲಿದೆ:

1528: ಮೊಘಲ್‌ ಸಾಮ್ರಾಟ್‌ ಬಾಬರನ ಕಮಾಂಡರ್‌ ಮಿರ್‌ ಬಕಿಯಿಂದ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣ.

1885; ಮಹಂತ್ ರಘುವೀರ್ ದಾಸ್ ಫೈಜಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮಸೀದಿಯ ಪಕ್ಕದಲ್ಲಿ ಗೋಪುರ ನಿರ್ಮಾಣಕ್ಕೆ ಮನವಿ, ಅರ್ಜಿ ತಿರಸ್ಕೃತ.

1859- ವಿವಾದಿತ ಸ್ಥಳವನ್ನು ಹಿಂದೂ-ಮುಸ್ಲಿಂಮರಿಗೆ ಹಂಚಿಕೆ ಮಾಡಿ ಪ್ರಾರ್ಥನೆ ಹಾಗೂ ದೇವಾರಾಧನೆಗೆ ಅವಕಾಶ ಮಾಡಿಕೊಟ್ಟ ಬ್ರಿಟಿಶ್ ಸರ್ಕಾರ

1949 – ವಿವಾದಿತ ಸ್ಥಳದಲ್ಲಿ ಮಸೀದಿಯ ಕೇಂದ್ರ ಗುಮ್ಮಟದೊಳಗೆ ರಾಮಲಲ್ಲಾನ ವಿಗ್ರಹಗಳ ಪ್ರತಿಷ್ಠಾಪನೆ.

1950: ಗೋಪಾಲ್ ಸಿಮ್ಲಾ ವಿಶಾರದ್ ಮತ್ತು ಪರಮಹಂಸ ರಾಮಚಂದ್ರ ದಾಸ್ ಫೈಜಾಬಾದ್ ಕೋರ್ಟ್ ನಲ್ಲಿ ಎರಡು ದಾವೆ ಸಲ್ಲಿಸಿ ಮಸೀದಿಯಲ್ಲಿ ಮೂರ್ತಿ ಆರಾಧನೆಗೆ ಅನುಮತಿ ಕೋರಿ ಮನವಿ ಸಲ್ಲಿಕೆ,

1959 – ವಿವಾದಿತ ಜಾಗದ ಸ್ವಾಧೀನ ಕೋರಿ ನಿರ್ಮೋಹಿ ಅಖಾಡದಿಂದ ಅರ್ಜಿ ಸಲ್ಲಿಕೆ

1961- ವಿವಾದಿತ ಸ್ಥಳ ನಮ್ಮದು ಎಂದು ನ್ಯಾಯಾಲಯದ ಮೊರೆ ಹೋದ ಸುನ್ನಿ ವಕ್ಫ್ ಮಂಡಳಿ

1981: ಉತ್ತರ ಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಬೋರ್ಡ್ ಸ್ಥಳದ ಸ್ವಾಧೀನ ಕೋರಿ ಅರ್ಜಿ, ಮಸೀದಿಯಿಂದ ಮೂರ್ತಿ ತೆಗೆಯುವಂತೆ ಕೋರಿ ಮನವಿ.

1986 – ವಿವಾದಗ್ರಸ್ತ ಜಾಗದಲ್ಲಿ ಹಿಂದೂಗಳ ಪೂಜೆಗೆ ಅನುವು ಮಾಡಿಕೊಡುವಂತೆ ಸ್ಥಳೀಯ ನ್ಯಾಯಾಲಯ ಆದೇಶ.

1989: ವಿವಾದಗ್ರಸ್ತ ಜಾಗದ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಅಲಹಾಬಾದ್‌ ಹೈಕೋರ್ಟ್‌ ಆದೇಶ.

1990- ವಿವಾದಿತ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಲಾಲ್ ಕೃಷ್ಣ ಅದ್ವಾಣಿ ನೇತೃತ್ವದಲ್ಲಿ ಬಿಜೆಪಿಯಿಂದ ರಥಯಾತ್ರೆ

1992, ಡಿ.6: ಬಾಬ್ರಿ ಮಸೀದಿ ಧ್ವಂಸ.

1993: ವಿವಾದಿತ ಜಾಗವನ್ನು ಕೇಂದ್ರ ಸ್ವಾಧೀನಪಡಿಸಿಕೊಳ್ಳುವುದಕ್ಕಾಗಿ ‘ಅಯೋಧ್ಯೆ ನಿರ್ದಿಷ್ಟ ಪ್ರದೇಶದ ಸ್ವಾಧೀನ ಕಾಯಿದೆ’ ಅಂಗೀಕಾರ. ಇದಕ್ಕೆ ಇಸ್ಮಾಯಿಲ್‌ ಫಾರೂಕಿ ಸೇರಿದಂತೆ ಹಲವರಿಂದ ತಕರಾರು ಅರ್ಜಿ.

2002: ಜಾಗದ ಒಡೆತನ ಯಾರಿಗೆ ಸೇರಿದ್ದು ಎನ್ನುವ ವ್ಯಾಜ್ಯ ಕುರಿತು ಅಲಹಾಬಾದ್‌ ಹೈಕೋರ್ಟ್‌ ವಿಚಾರಣೆ ಆರಂಭ.

2010: ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮ್‌ಲಲ್ಲಾ ಮೂರೂ ವಾರಸುದಾರರಿಗೆ ವಿವಾದಿತ ಜಾಗದ ಸಮಾನ ಹಂಚಿಕೆ ಮಾಡಿ ತೀರ್ಪು.

2011: ಅಯೋಧ್ಯೆ ಭೂ ವಿವಾದ ಕುರಿತ ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ತಡೆ.

2017: ಪರಸ್ಪರ ಸಂಧಾನ ಸಮ್ಮತಿ ಮೂಲಕ ವ್ಯಾಜ್ಯ ಇತ್ಯರ್ಥ ಪಡಿಸಿಕೊಳ್ಳಲು ಸಿಜೆಐ ಜೆ.ಎಸ್‌. ಖೇಹರ್‌ ಸಲಹೆ.

2017: ಅಲಹಾಬಾದ್‌ ಹೈಕೋರ್ಟ್‌ನ 1994ರ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ತ್ರಿಸದಸ್ಯ ಪೀಠ ರಚನೆ.

2018: ತನ್ನ 1994ರ ತೀರ್ಪಿನ ಮರು ಪರಿಶೀಲನೆ ಕೋರಿದ ಅರ್ಜಿಗಳ ವಿಚಾರಣೆಯನ್ನು 5 ಸದಸ್ಯರ ವಿಸ್ತೃತ ಪೀಠಕ್ಕೆ ಒಪ್ಪಿಸಲು ಕೋರಿ ರಾಜೀವ್‌ ಧವನ್‌ ಅವರಿಂದ ಅರ್ಜಿ.

2019: ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಯ ಯತ್ನ ವಿಫಲ. ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದಿಂದ ನಲವತ್ತು ದಿನಗಳ ಕಾಲ ವಿಚಾರಣೆ

2019: ನವೆಂಬರ್ 9 – ಅಯೋಧ್ಯೆ ಅಂತಿಮ ತೀರ್ಪು ಪ್ರಕಟ, ವಿವಾದಿತ ಭೂಮಿ ರಾಮಲಲ್ಲಾ ಪಾಲು, ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ.

No Comments

Leave A Comment