Log In
BREAKING NEWS >
ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ..

ಹಿರಿಯ ಕ್ರೀಡಾ ಪತ್ರಕರ್ತ ಡಿ.ಗರುಡ ವಿಧಿವಶ

ಬೆಂಗಳೂರು: ಹಿರಿಯ ಕ್ರೀಡಾ ಪತ್ರಕರ್ತರಾದ ದಿಗಂಬರ ಯೋಗೇಶ ಗರುಡ (45) ಶುಕ್ರವಾರ ವಿಧಿವಶರಾಗಿದ್ದಾರೆ.

ಕನ್ನಡದ ಖ್ಯಾತ ನಾಟಕಕಾರರರಾಗಿದ್ದ ಗರುಡ ಸದಾಶಿವರಾಯರ ಮೊಮ್ಮಗನಾಗಿದ್ದ ಡಿ. ಗರುಡ ಅವರು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಿಂದ ಪತ್ರಿಕೋದ್ಯಮ ಪದವಿ ಪಡೆದಿದ್ದರು. “ಪ್ರಜಾವಾಣಿ” ಪತ್ರಿಕೆಯಲ್ಲಿ ಸುಮಾರು ಹನ್ನೆರಡು ವರ್ಷ ಕಾಲ ಕ್ರೀಡಾ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಗರುಡ ವಿಜಯ ಕರ್ನಾಟಕದಲ್ಲಿ ಕ್ರೀಡಾ ಸಂಪಾದಕರಾಗಿ ಎರಡು ವರ್ಷ ಕಾಲ ಕೆಲಸ ಮಾಡಿದ್ದರು.

ಸುದ್ದಿವಾಹಿನಿಗಳು,  ರೇಡಿಯೋನಲ್ಲಿ ಅರೆಕಾಲಿಕ ವರದಿಗಾರರಾಗೊಕೆಲ ಕಾಲ ದುಡಿದ ಗರುಡ “ಸುಪ್ರಭಾತ” ವಾಹಿನಿ ಮೂಲಕ ತಮ್ಮ ವೃತ್ತಿ ಜೀಓವನ ಪ್ರಾರಂಭಿಸಿದ್ದರು ಕಡೆಗೆ ಬಹುಕಾಲದ ನಂತರ ಮತ್ತೆ ಸುದ್ದಿವಾಹಿನಿಗಳು, ಆಕಾಶವಾಣಿಯಲ್ಲಿ ಕೆಲಸ ಮಾಡಿದ್ದಾರೆ.

ಮೃತರು ಪತ್ನಿ ಶೋಭಾ ಲೋಕನಾಥ್ ಹಾಗೂ ಪುತ್ರಿ ತಪಸ್ಯಾ ಅವರನ್ನು ಅಗಲಿದ್ದಾರೆ.

No Comments

Leave A Comment