Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಅಯೋಧ್ಯೆ ತೀರ್ಪು ಹಿಂದೂಗಳ ಪರ ಬರುವ ನಿರೀಕ್ಷೆ ಇದೆ : ಪೇಜಾವರ ಶ್ರೀ

ಅಯೋಧ್ಯೆ ತೀರ್ಪು ಹಿಂದೂಗಳ ಪರವಾಗಿ ಬರುವ ನಿರೀಕ್ಷೆ ಇದೆ ಆದರೆ ಯಾರೂ ಕೂಡ ವಿಜಯೋತ್ಸವ ಮಾಡಬಾರದು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಶ್ರೀಗಳು ವಿಜಯೋತ್ಸವ ಮಾಡಿ ಯಾವುದೇ ಸಮುದಾಯದ ಶಾಂತಿಭಂಗ ಆಗಬಾರದು.

ಕರಾವಳಿಯಲ್ಲಿ ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು ತೀರ್ಪು ಯಾರ ಪರ ಬಂದರೂ ಜನರು ಶಾಂತಿ ಕಾಪಾಡಬೇಕು, ಮೆರವಣಿಗೆ ವಿಜಯೋತ್ಸವದಿಂದ ಘರ್ಷಣೆಗೆ ಅವಕಾಶವಾಗುತ್ತದೆ. ಒಂದು ವೇಳೆ ಶಾಂತಿಭಂಗವಾದಲ್ಲಿ ಉಪವಾಸ ಕುಳಿತುಕೊಳ್ಳುತ್ತೇನೆ ಎಂದು ಹೇಳಿ ಶ್ರೀಗಳು, ಒಂದು ವೇಳೆ ಹಿಂದೂಗಳ ಪರ ತೀರ್ಪು ಬಂದರೆ ರಾಮಮಂದಿರ ನಿರ್ಮಾಣ ಆಗಲಿದೆ ಎಂದರು

No Comments

Leave A Comment