Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಅಮೆರಿಕದಲ್ಲಿ ಭಾರತೀಯ ಮೂಲದ ನಾಲ್ವರು ರಾಜ್ಯ ಮತ್ತು ಸ್ಥಳೀಯ ಚುನಾವಣೆಯಲ್ಲಿ ಜಯಭೇರಿ

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ನಡೆದ ರಾಜ್ಯ ಮತ್ತು ಸ್ಥಳೀಯ ಚುನಾವಣೆಯಲ್ಲಿ ಭಾರತೀಯ ಮೂಲದ ನಾಲ್ವರು ಅಮೆರಿಕನ್ ಪ್ರಜೆಗಳು ಜಯಗಳಿಸುವ ಮೂಲಕ ಇತಿಹಾಸ ದಾಖಲಿಸಿರುವುದಾಗಿ ವರದಿ ತಿಳಿಸಿದೆ.

ಭಾರತೀಯ ಮೂಲದ ಘಾಝಾಲಾ ಹಾಶ್ಮಿ (ಕಮ್ಯೂನಿಟಿ ಕಾಲೇಜಿನ ನಿವೃತ್ತ ಪ್ರೊಫೆಸರ್) ವರ್ಜಿನಿಯಾ ಸ್ಟೇಟ್ ಸೆನೆಟ್ ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ವೇಳೆ ಶ್ವೇತ ಭವನದ ಮಾಜಿ ತಾಂತ್ರಿಕ ನೀತಿಗಳ ಸಲಹೆಗಾರರಾಗಿದ್ದ ಸುಹಾಸ್ ಸುಬ್ರಮಣ್ಯಂ ವರ್ಜಿನಿಯಾ ಸ್ಟೇಟ್ ಹೌಸ್ ಆಫ್ ನ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಮನೋ ರಾಜು ಅವರು ಸ್ಥಳೀಯ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ.

ತಮಿಳುನಾಡಿನಿಂದ ಅಮೆರಿಕಕ್ಕೆ ರಾಜು ಅವರ ಪೋಷಕರು ವಲಸೆ ಬಂದಿದ್ದರು. 1990ರಲ್ಲಿ ದಕ್ಷಿಣ ಏಷ್ಯಾ ಅಧ್ಯಯನದಲ್ಲಿ ಮಾಸ್ಟರ್ ಡಿಗ್ರಿ ಪದವಿ ಪಡೆದಿದ್ದರು.

ಉತ್ತರ ಕರೋಲಿನಾದಲ್ಲಿ ಡಿಂಪಲ್ ಅಜ್ಮೇರಾ ಅವರು ಚಾರ್ಲೊಟ್ಟೆ ನಗರದ ಕೌನ್ಸಿಲ್ ಗೆ ನಡೆದ ಮರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅಜ್ಮೇರಾ 16ವರ್ಷದ ಬಾಲಕಿಯಾಗಿದ್ದಾಗಲೇ ಆಕೆಯ ಪೋಷಕರು ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.

No Comments

Leave A Comment