Log In
BREAKING NEWS >
ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ..

ಕೇರಳ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ವಿಡಿಯೋ ಮಾಡಿದ ಆರೋಪಿಗಳ ಬಂಧನ

ಕೇರಳ: 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಮೊಬೈಲ್ ನಲ್ಲಿ ವಿಡಿಯೋ ಮಾಡಿದ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡದಿದೆ.

ಆರೋಪಿಗಳಾದ ಲಿತಿನ್ (19), ಬಿಬಿನ್ (25) ಮತ್ತು ವರ್ಷಾ (25) ರನ್ನು ಎರ್ನಾಕುಲಂ ನಗರ ಪೊಲೀಸ್ ಠಾಣೆಯ ಪೊಲೀಸರು ನ.6ರ ಬುಧವಾರ ಬಂಧಿಸಿದ್ದು, ಅವರನ್ನು ಪೋಕ್ಸೋ ಕೋರ್ಟ್ ಆದೇಶದಂತೆ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಅವರ ಮೊಬೈಲ್ ಫೋನ್ ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ಆರೋಪಿ ಲಿತಿನ್ ಹಾಗೂ ಬಾಲಕಿಯೂ ಪರಿಚಯಸ್ಥರಾಗಿದ್ದಾರೆ. ಈ ಮೊದಲು ಜೂನ್ ತಿಂಗಳಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈಗ ಬೆದರಿಸಿ ಮಗದೊಮ್ಮೆ ಲೈಂಗಿಕ ಕಿರುಕುಳ ಮಾಡಿದ್ದಾನೆ. ಇದನ್ನು ಬಾಲಕಿಯ ನೆರೆಮನೆಯವರಾದ ಬಿಬಿನ್ ಮತ್ತ ವರ್ಷಾ ಮೊಬೈಲ್ ನಲ್ಲಿ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾರೆ ಎಂದು ಪೊಲೀಸ್ ತಿಳಿಸಿದ್ದಾರೆ.

ಈ ಕುರಿತು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.

No Comments

Leave A Comment