Log In
BREAKING NEWS >
ಬ್ಯಾಂಕ್ ನಲ್ಲಿ ಸೀಕ್ರೆಟ್ ಲಾಕರ್ ಹೊಂದಿದ್ದ ಬಾಂಬರ್ ಆದಿತ್ಯ ರಾವ್...ಚೀನಾದಲ್ಲಿ ಕರೋನ ವೈರಸ್‌ ಮಹಾಮಾರಿ: ಚಿಕಿತ್ಸೆ ನೀಡುತ್ತಿದ್ದ ವೈದ್ಯನೇ ಮಾರಣಾಂತಿಕ ಕಾಯಿಲೆಗೆ ಬಲಿ...

ಭಾರತದಲ್ಲಿರುವ ಇಸ್ರೇಲ್ ಪ್ರವಾಸಿಗರ ಅಪಹರಣಕ್ಕೆ ಅಲ್ ಖೈದಾ, ಐಸಿಸ್ ಸಂಚು: ಗುಪ್ತಚರ ಇಲಾಖೆ

ನವದೆಹಲಿ:ಭಾರತದಲ್ಲಿ ನೆಲೆಸಿರುವ ಇಸ್ರೇಲ್ ಪ್ರಜೆಗಳನ್ನು ಗುರಿಯಾಗಿರಿಸಿಕೊಂಡು ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಅಲ್ ಖೈದಾ ಹಾಗೂ ಐಸಿಸ್ ದಾಳಿ ನಡೆಸುವ ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.

ಭಾರತದಲ್ಲಿರುವ ಜ್ಯೂವಿಶ್ ಹಾಗೂ ಇಸ್ರೇಲ್ ಪ್ರಜೆಗಳನ್ನು ಗುರಿಯಾಗಿರಿಸಿಕೊಂಡು ಅಪಹರಿಸಿರುವ ಸಂಚು ರೂಪಿಸಿರುವ ಬಗ್ಗೆ ಎರಡು ಭಯೋತ್ಪಾದಕ ಸಘಂಟನೆಗಳ ಅಂತರ್ಜಾಲತಾಣದ ಸಂದೇಶದ ಮೂಲಕ ಬಹಿರಂಗಗೊಂಡಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಮಾಧ್ಯಮದ ವರದಿ ಪ್ರಕಾರ, ಪ್ರಸಿದ್ಧ ಧಾರ್ಮಿಕ ಸ್ಥಳಗಳಾದ  ಫ್ರೀಮಾಸನ್ ದೇವಾಲಯ, ಸರ್ವೋತಮಂ ಮಾಸೋನಿಕ್ ದೇವಾಲಯ ಮತ್ತು ಕೇರಳದ ಕೊಚ್ಚಿಯಲ್ಲಿರುವ ಕೋಡೇರ್ ಹಾಲ್ ಮೇಲೆ ಜಿಹಾದಿಗಳ ದಾಳಿ ಬೆದರಿಕೆ ಇದ್ದಿರುವುದಾಗಿ ತಿಳಿಸಿದೆ.

ಅಲ್ ಖೈದಾ ಹಾಗೂ ಐಸಿಸ್ ಸಂಘಟನೆ ಜಿಹಾದಿ ಸಂಘಟನೆಯಿಂದ ಪ್ರಭಾವಿತಗೊಂಡಿದ್ದು, ಭಾರತದಲ್ಲಿ ಪ್ರವಾಸ ಕೈಗೊಂಡಿರುವ ಇಸ್ರೇಲ್ ಪ್ರವಾಸಿಗರನ್ನು ಅಪಹರಿಸುವ ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ ಎಂದು ವರದಿ ವಿವರಿಸಿದೆ.

No Comments

Leave A Comment