Log In
BREAKING NEWS >
ಬ್ಯಾಂಕ್ ನಲ್ಲಿ ಸೀಕ್ರೆಟ್ ಲಾಕರ್ ಹೊಂದಿದ್ದ ಬಾಂಬರ್ ಆದಿತ್ಯ ರಾವ್...ಚೀನಾದಲ್ಲಿ ಕರೋನ ವೈರಸ್‌ ಮಹಾಮಾರಿ: ಚಿಕಿತ್ಸೆ ನೀಡುತ್ತಿದ್ದ ವೈದ್ಯನೇ ಮಾರಣಾಂತಿಕ ಕಾಯಿಲೆಗೆ ಬಲಿ...

ದ್ವಿಚಕ್ರ ವಾಹನ ಸಹಿತ ಸೇತುವೆಯಿಂದ ನದಿಗೆ ಬಿದ್ದ ಯುವಕ: ಸಾವು

ವಿಟ್ಲ: ಯುವಕನೋರ್ವ ದ್ವಿಚಕ್ರ ವಾಹನ ಸಹಿತ ಸೇತುವೆಯಿಂದ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ಕಸಬಾ ಗ್ರಾಮದ ನೆಲ್ಲಿಗುಡ್ಡೆಯಲ್ಲಿ ನಡೆದಿದೆ.

ಮಡಿಕೇರಿ ನಿವಾಸಿಯಾಗಿರುವ ಸುನಿಲ್ ಮೃತ ದುರ್ದೈವಿ. ವಿಟ್ಲ ಕಸಬಾ ಗ್ರಾಮದ ನೆಲ್ಲಿಗುಡ್ಡೆಯ ಬಂಧುಗಳ ಮನೆಗೆ ಬಂದಿದ್ದ ಯುವಕ ಸುನಿಲ್, ದ್ವಿಚಕ್ರ ವಾಹನದಲ್ಲಿ ಸೇತುವೆಯ ಮೇಲೆ ಸಂಚರಿಸುವಾಗ ಆಕಸ್ಮಿಕವಾಗಿ ನದಿಗೆ ಬಿದ್ದಿರಬೇಕೆಂದು ಊಹಿಸಲಾಗಿದೆ.

ಸೇತುವೆ ನಿರ್ಮಾಣ ಹಂತದಲ್ಲಿದ್ದು, ಇನ್ನೂ ತಡೆಗೋಡೆ ಕಾಮಗಾರಿ ಬಾಕಿಯಿದೆ. ರಾತ್ರಿ ಹೊತ್ತಿನಲ್ಲಿ ಸೇತುವೆ ಗಮನಕ್ಕೆ ಬರದೆ ಈ ಅಪಘಾತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಈತ ನಾಪತ್ತೆಯಾಗಿದ್ದಾನೆ ಎಂದು ನೆಲ್ಲಿಗುಡ್ಡೆಯ ಆತನ ಬಂಧುಗಳು ವಿಟ್ಲ ಠಾಣೆಗೆ ದೂರು ನೀಡಿದ್ದರು.

No Comments

Leave A Comment