Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಉಗ್ರರ ಅಟ್ಟಹಾಸಕ್ಕೆ 54 ಜನ ಬಲಿ!: ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್!

ಬಮಾಕೊ: ಉಗ್ರರ ಅಟ್ಟಹಾಸಕ್ಕೆ 54 ಜನ ಬಲಿಯಾಗಿರುವ ಘಟನೆ ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಅಲ್ಲಿನ ಸೇನೆ ಮೇಲೆ ನಡೆದಿರುವ ಭೀಕರ ದಾಳಿ ಇದಾಗಿದ್ದು, ಇಸ್ಲಾಮಿಕ್ ಸ್ಟೇಟ್ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ.

ಅಮಾಕ್ ನ್ಯೂಸ್ ಏಜೆನ್ಸಿ ಮೂಲಕ ಇಸ್ಲಾಮಿಕ್ ಸ್ಟೇಟ್ ಈ ಕೃತ್ಯವನ್ನೆಸಗಿದ್ದು ತಾನೇ ಎಂದು ಹೇಳಿಕೊಂಡಿದೆ. ಅಮೆರಿಕ ವಿಶೇಷ ಪಡೆಗಳು ಇಸ್ಲಾಮಿಕ್ ಸ್ಟೇಟ್ ನ ನಾಯಕ ಅಬು ಬಕರ್ ಅಲ್-ಬಗ್ದಾದಿಯನ್ನು ಹತ್ಯೆ ಮಾಡಿದ ಬಳಿಕ ಹಲವು ರಾಷ್ಟ್ರಗಳಲ್ಲಿ ನಡೆದಿರುವ ವಿಧ್ವಂಸಕ ಕೃತ್ಯಗಳಿಗೆ ಇಸ್ಲಾಮಿಕ್ ಸ್ಟೇಟ್ ತಾನೇ ಹೊಣೆ ಎಂದು ಘೋಷಿಸಿಕೊಂಡಿದೆ.

ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಸೇನೆ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರು ದಾಳಿ ನಡೆಸಿದ್ದು, ಅಲ್ಲಿನ ಸೇನೆ ಉಗ್ರರ ಮೇಲೆ ಪ್ರತಿ ದಾಳಿ ನಡೆಸಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ಸೇನೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಘಟನೆಯಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದಾನೆ.

No Comments

Leave A Comment