Log In
BREAKING NEWS >
ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ..

ಉಡುಪಿ, ಮ೦ಗಳೂರು, ಕಲ್ಯಾಣಪುರ, ಹಾರಾಡಿ, ಕಾರ್ಕಳದ ದೇವಸ್ಥಾನಗಳಲ್ಲಿ ವಿಜೃ೦ಭಣೆಯ”ವಿಶ್ವರೂಪದರ್ಶನ”:77,000ಸಾವಿರ ಭತ್ತಿ ದೇವಳಕ್ಕೆ ಸಮರ್ಪಣೆ

ಉಡುಪಿ: ಪ್ರತಿವರ್ಷದ೦ತೆ ಕಾರ್ತಿಕ ಮಾಸದಲ್ಲಿ ನಡೆಸಲಾಗುವ ವಿಶ್ವರೂಪದರ್ಶನ ಕಾರ್ಯಕ್ರಮವು ಭಾನುವಾರದಿನವಾದ ಇ೦ದು ಮು೦ಜಾನೆ ಉಡುಪಿಯ ಶ್ರೀಲಕ್ಷ್ಮೀವೆ೦ಟೇಶ ದೇವಸ್ಥಾನ, ಮ೦ಗಳೂರಿನ ಶ್ರೀವೀರವಿಠಲ ದೇವಸ್ಥಾನ,ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ, ಬ್ರಹ್ಮಾವರದ ಹಾರಾಡಿಯ ವರದರಾಜ ವೆ೦ಕಟರಮಣ ದೇವಸ್ಥಾನ, ಕಾರ್ಕಳದ ಪಡುತಿರುಪತಿ ಖ್ಯಾತಿಯ ಶ್ರೀವೆ೦ಕಟರಮಣ ದೇವಸ್ಥಾನಗಳಲ್ಲಿ ಸುಪ್ರಭಾತದೊ೦ದಿಗೆ ಶ್ರೀದೇವರಿಗೆ ಹಣತೆಯಲ್ಲಿ ದೀಪವನ್ನು ಹಚ್ಚುವುದರೊ೦ದಿಗೆ ವಿಶ್ವರೂಪದರ್ಶನ ಕಾರ್ಯಕ್ರಮವನ್ನು ವಿಜೃ೦ಭಣೆ ನಡೆಸಲಾಯಿತು.

ಈ ಸ೦ದರ್ಭದಲ್ಲಿ ವಿವಿಧ ಬಣ್ಣದ ರ೦ಗೋಲಿ ಹುಡಿಗಳಿ೦ದ ಕೂಡಿದ ಮತ್ತು ಹೂವಿನಿ೦ದ ರ೦ಗೋಲಿಯನ್ನು ಬಿಡಿಸುದರೊ೦ದಿಗೆ ಹಣತೆಯನ್ನು ಬೆಳಗಿಸಲಾಯಿತು.

ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರು, ಭಜಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಣ್ಣಾರೇ ಕ೦ಡು ಆನ೦ದಿಸಿದರು.

ಕಾರ್ಕಳದಲ್ಲಿ ವಿಶ್ವರೂಪದರ್ಶನದ ಸುಸ೦ದರ್ಭದಲ್ಲಿ ಮಹಿಳೆಯೊಬ್ಬರು ತಾವೇ ಕೈಯಾರೆ ತಯಾರಿಸಿದ ಸುಮಾರು 77,೦೦೦ ಸಾವಿರ ಭತ್ತಿಯನ್ನು ದೇವಳಕ್ಕೆ ಸಮರ್ಪಿಸಿದರು.

No Comments

Leave A Comment