Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

ಡಿವೈಡರ್‌ಗಳಿಗೆ ಹಸಿರು ಬಣ್ಣದ ಪರದೆ ಅಳವಡಿಕೆ-ಅಪಘಾತ ತಪ್ಪಿಸಲು ಉಪಾಯ

ಉಡುಪಿ: ರಾಷ್ಟ್ರೀಯ ಹೆದ್ದಾರಿಯ ಬಸ್‌ ನಿಲ್ದಾಣದಲ್ಲಿ ಅಪಘಾತ ತಪ್ಪಿಸಲು ಜಿಲ್ಲಾ ಪೊಲೀಸ್‌ ಇಲಾಖೆ ಪ್ರಾಯೋಗಿಕವಾಗಿ ಹೆದ್ದಾರಿ ಡಿವೈಡರ್‌ ಮಧ್ಯದಲ್ಲಿ ಹಸಿರು ಬಣ್ಣದ ಪರದೆ ಅಳವಡಿಸಿದೆ.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್‌ ಹಿಡಿಯುವ ತರಾತುರಿಯಲ್ಲಿ ಎಲ್ಲೆಂದರಲ್ಲಿ ರಸ್ತೆ ದಾಟುತ್ತಿದ್ದಾರೆ. ಇದರಿಂದಾಗಿ ವೇಗವಾಗಿ ಬರುವ ವಾಹನ ಸವಾರರು ಒಮ್ಮೆಲೇ ಬ್ರೇಕ್‌ ಹಾಕುವುದರಿಂದ ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತಿವೆೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಹೆಚ್ಚು ಜನಸಂದಣಿ ಇರುವ ಬಸ್‌ ನಿಲ್ದಾಣದ ಡಿವೈಡರ್‌ಗಳ ಮಧ್ಯೆ ಪರದೆ ಹಾಕುವ ಕೆಲಸ ಆರಂಭಿಸಿದೆ.

ಎಲ್ಲೆಲ್ಲಿ ಪರದೆ?
ಪ್ರಸ್ತುತ ಜಿಲ್ಲಾ ಪೊಲೀಸ್‌ ಇಲಾಖೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ, ಬ್ರಹ್ಮಾವರದ ಎಸ್‌ಎಂಎಸ್‌, ಸಂತೆಕಟ್ಟೆ (ಜಂಕ್ಷನ್‌) ಹಾಗೂ ರಾ.ಹೆ. 169ಎ ಉಡುಪಿ – ಮಣಿಪಾಲ ಮಾರ್ಗದ ಎಂಜಿಎಂ ಕಾಲೇಜಿನ ಬಸ್‌ ನಿಲ್ದಾಣದ ಮುಂಭಾಗದ ಹೆದ್ದಾರಿ ಡಿವೈಡರ್‌ ಮಧ್ಯ ಹಸಿರು ಬಣ್ಣದ ಪರದೆಯನ್ನು ಅಳವಡಿಸಲಾಗಿದೆ.

ಅನಾಗರಿಕ ವರ್ತನೆ
ಅಪಘಾತ ತಡೆಯಲು ಸಂತೆಕಟ್ಟೆಯಲ್ಲಿ ಅಳವಡಿಸಿದ ಪರದೆಯನ್ನು ಒಂದೇ ದಿನದಲ್ಲಿ ಕೆಲವರು ಕಿತ್ತೆಸೆದಿದ್ದಾರೆ. ಜನರ ಪ್ರಾಣರಕ್ಷಣೆಯ ಉದ್ದೇಶದಲ್ಲಿ ಹಾಕಿದ್ದರೂ ಅದನ್ನು ತೆಗೆಯುವ ಮೂಲಕ ಅನಾಗರಿಕ ವರ್ತನೆ ತೋರಿದ್ದಾರೆ.

ಪ್ರಾಯೋಗಿಕವಾಗಿ ಪರದೆ ಅಳವಡಿಕೆ
ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲ ಬಸ್‌ ನಿಲ್ದಾಣದ ರಸ್ತೆಯ ಡಿವೈಡರ್‌ಗಳಿಗೆ ಪ್ರಾಯೋಗಿಕವಾಗಿ ಹಸಿರು ಪರದೆ ಆಳವಡಿಸಲಾಗಿದೆ. ಇದರಿಂದ ಅಪಘಾತ ಕಡಿಮೆಯಾದರೆ ಶಾಶ್ವತ ಪರಿಹಾರಕ್ಕೆ ಅಗತ್ಯವಿರುವ ಕ್ರಮ ತೆಗೆದುಕೊಳ್ಳಲಾಗುತ್ತದೆ.
-ಕುಮಾರಚಂದ್ರ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಉಡುಪಿ

ಶಾಶ್ವತ ಪರಿಹಾರ
ರಸ್ತೆ ಪರದೆ ಹಾಕಿರುವುದು ಉತ್ತಮ. ಸಾರ್ವಜನಿಕರು ಎಲ್ಲೆಂದರಲ್ಲಿ ರಸ್ತೆ ದಾಟುವುದರಿಂದ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ತಾತ್ಕಾಲಿಕ ಪರದೆ ಬದಲಾಗಿ ಶಾಶ್ವತವಾದ ಪರಿಹಾರ ನೀಡಬೇಕು. ಹಿಂದೊಮ್ಮೆ ಸಂತೆಕಟ್ಟೆಯ ರಸ್ತೆಯ ಮಧ್ಯದ ಡಿವೈಡರ್‌ಗೆ ಆಳವಡಿಸಿದ ಪರದೆ ಒಂದೇ ವಾರದಲ್ಲಿ ಮಾಯವಾಗಿತ್ತು.

No Comments

Leave A Comment