Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ದೆಹಲಿಗರನ್ನು ಕಂಗೆಡಿಸಿದೆ ವಾಯುಮಾಲಿನ್ಯ: ಆಸ್ಪತ್ರೆಗಳಲ್ಲಿ ತುಂಬಿದ ರೋಗಿಗಳು, ಶಾಲೆಗಳಿಗೆ ನ.5ರವರೆಗೆ ರಜೆ

ನವದೆಹಲಿ: ರಾಜಧಾನಿ ದೆಹಲಿಯ ಮಾಲಿನ್ಯ ಮಟ್ಟ ತೀರಾ ಹದಗೆಟ್ಟಿದ್ದು ಅಸ್ತಮಾದಿಂದ ಬಳಲುತ್ತಿರುವವರು ಉಸಿರಾಟದ ತೊಂದರೆಗೊಳಗಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.


ದೆಹಲಿಯ ಏಮ್ಸ್ ಆಸ್ಪತ್ರೆಯ ವಿಜಯ್ ಹಡ್ಡಾ, ಆಸ್ತಮಾದೊಂದಿಗೆ ಹೋರಾಡುವ ರೋಗಿಗಳು ವಾಯುಮಾಲಿನ್ಯದಿಂದಾಗಿ ಶಾಶ್ವತವಾಗಿ ಅಸ್ತಮಾ ಹೊಂದುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ದಿನದಿಂದ ದಿನಕ್ಕೆ ಮಾಲಿನ್ಯ ಮಟ್ಟ ಇಳಿಕೆಯಾಗುತ್ತಿರುವುದರಿಂದ ಜನರ ನಿತ್ಯ ಜೀವನದಲ್ಲಿ ಬದಲಾವಣೆಯಾಗುತ್ತಿದೆ. ಹಲವರಿಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ, ಗಂಟಲು ಮತ್ತು ಕಣ್ಣುಗಳಲ್ಲಿ ತುರಿಕೆ, ಸೀನುವಿಕೆ, ತಲೆನೋವು ಮತ್ತು ಬಾಯಿಯಲ್ಲಿ ಕಹಿ ರುಚಿ ಇತ್ಯಾದಿ ತೊಂದರೆಗಳುಂಟಾಗುತ್ತಿದೆ. ಇವೆಲ್ಲ ಆರಂಭಿಕ ಲಕ್ಷಣಗಳಾಗಿದ್ದು ಮುಂದೆ ಗಂಭೀರ ಉಸಿರಾಟದ ತೊಂದರೆಯುಂಟಾಗಬಹುದು ಎಂದು ಹಡ್ಡಾ ಹೇಳಿದ್ದಾರೆ.

ದೀಪಾವಳಿ ಕಳೆದ ನಂತರ ದೆಹಲಿ-ಎನ್ ಸಿಆರ್ ಸುತ್ತಮುತ್ತ ಆಸ್ಪತ್ರೆಗಳಲ್ಲಿ ಉಸಿರಾಟ ತೊಂದರೆ, ಅಸ್ತಮಾ, ಕಣ್ಣುರಿ, ಅಲರ್ಜಿ ಇತ್ಯಾದಿ ಸಮಸ್ಯೆಗಳಿಂದ ರೋಗಿಗಳು ತುಂಬಿ ತುಳುಕುತ್ತಿದ್ದಾರೆ. ನಿನ್ನೆ ಬೆಳಗ್ಗೆ 10 ಗಂಟೆಗೆ ದೆಹಲಿಯ ವಾಯುಮಾಲಿನ್ಯ ಸೂಚ್ಯಂಕ 407 ಆಗಿತ್ತು. ಅದು ನಿನ್ನೆ ಸಂಜೆಯ ಹೊತ್ತಿಗೆ 484 ಆಗಿತ್ತು.

ಈ ಮಧ್ಯೆ ಆರೋಗ್ಯ ದೃಷ್ಟಿಯಿಂದ ಶಾಲೆಗಳಿಗೆ ಇದೇ 5ರವರೆಗೆ ರಜೆ ಘೋಷಿಸಲಾಗಿದೆ.

ಧೂಳು, ಹೊಗೆಯಿಂದ ದಟ್ಟ ವಾಯುಮಾಲಿನ್ಯ: ನೆರೆಯ ರಾಜ್ಯಗಳಲ್ಲಿ ಬೆಳೆ ಕಟಾವು ಮಾಡಿದ ನಂತರ ಕಳಪೆಯನ್ನು ತೆಗೆಯಲು ಬೆಂಕಿಯಿಂದ ಸುಡುವುದರಿಂದ ಮತ್ತು ಮಣ್ಣಿನಿಂದ ಧೂಳಿಗಳಿಂದಾಗಿಯೇ ಇಂದು ದೆಹಲಿ ಸುತ್ತಮುತ್ತ ಇಷ್ಟೊಂದು ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

No Comments

Leave A Comment