Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಉಡುಪಿಯಲ್ಲಿ ಕನ್ನಡ ಭಾಷೆಗೆ ಕನ್ನಡರಾಜ್ಯೋತ್ಸವದ೦ದೇ ಅಪಮಾನ

ಉಡುಪಿ: ಉಡುಪಿಯಲ್ಲಿ ನಡೆಯಲಿರುವ ಬೃಹತ್ ಯೋಗ ಶಿಬಿರದ ಕರಪತ್ರದಲ್ಲಿ ಕನ್ನಡಕ್ಕೆ ಅಪಮಾನವಾಗಿರುವುದು ಭಾರೀ ಚರ್ಚಗೆ ಗ್ರಾಸವಾಗಿ ಬುದ್ಧಿವ೦ತರ ನಾಡು ಎ೦ದು ಬೆನ್ನು ತಟ್ಟಿಕೊಳ್ಳುತ್ತಿರುವ ಉಡುಪಿಯ ಜನತೆ ತಲೆ ತಗ್ಗಿಸುವ೦ತೆ ಮಾಡಿದೆ.

ಕನ್ನಡರಾಜ್ಯೋತ್ಸವದ ದಿನವಾದ ಶುಕ್ರವಾರದ೦ದು ಯೋಗ ಪೀಠದ ಕಾರ್ಯಕರ್ತರು ನಗರದ ರಥಬೀದಿಯಲ್ಲಿ ಅ೦ಗಡಿ. ಅ೦ಗಡಿಗೆ ಈ ಕರಪತ್ರವನ್ನು ಶ್ವೇತದಾರಿವಸ್ರ್ತವನ್ನು ಧರಿಸಿ ಏನೋ ಸಾಧನೆಮಾಡುವವ೦ತೆ ಗು೦ಪಾಗಿ ಬ೦ದು ಯೋಗ ಕಾರ್ಯಕ್ರಮದ ಪ್ರಚಾರದಲ್ಲಿ ತೊಡಗಿದ್ದರು. ಅದರೆ ಕರಪತ್ರವನ್ನು ಬುದ್ಧಿವ೦ತ ನಾಡು ಅದರಲ್ಲಿ ಯೂ ಶ್ರೀಕೃಷ್ಣನ ಊರಿನಲ್ಲಿ ನವೆ೦ಬರ್ 16ರಿ೦ದ 20ರವರೆಗೆ ಯೋಗ ಶಿಬಿರವನ್ನು ಹಮ್ಮಿ ಕೊ೦ಡಿರುವುದು ಸ೦ತಸದ ವಿಷಯ. ಅದರೆ ಈ ಯೋಗ ಕಾರ್ಯಕ್ರಮ ಶಿಬಿರದಲ್ಲಿ ಅದೆಷ್ಟೋ ಉಡುಪಿಯ ಬುದ್ಧಿವ೦ತರು ಪಾಲ್ಗೊ೦ಡಿದ್ದಾರೆ. ಅವರೆಲ್ಲರೂ ಹೆಚ್ಚಿನವರು ಕನಾರ್ಟಕದಲ್ಲಿ ಹುಟ್ಟಿಬೆಳೆದವರೆ. ಅದರೆ ಅವರೇ ತಮ್ಮ ರಾಜ್ಯ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಈ ರೀತಿ ತಪ್ಪಾಗಿ ಬರೆದಿರುವುದು ಸರಿಯಲ್ಲವೆ೦ಬುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇ೦ದು(ಶುಕ್ರವಾರ)ಕನ್ನಡರಾಜ್ಯೋತ್ಸವದ ದಿನ. ಇದು ಕನ್ನಡಕ್ಕೆ ಮಾಡಿರುವ ಅಪಮಾನ.ಯಾರಿಗೂ ಈ ಬಗ್ಗೆ ತಿಳಿದಿಲ್ಲವೇ? ಶಿಬಿರದ ಉಸ್ತುವಾರಿಯನ್ನು ಉಡುಪಿಯ ಪ್ರತಿಷ್ಠಿತ ಉದ್ಯಮಿಯೊಬ್ಬರು ವಹಿಸಿಕೊ೦ಡಿದ್ದಾರೆ. ಅದರೆ ಅವರಿಗೂ ಈ ವಿಷಯ ತಿಳಿದಿಲ್ಲವೇ ಸ್ವಾಮಿ ಎ೦ದು ಜನ ನಗಾಡುತ್ತಿದ್ದಾರೆ. ಈ ಸುದ್ದಿಯನ್ನು ಯಾರ ವಿರುದ್ದವೂ ಉದ್ದೇಶ ಪೂರಕವಾಗಿ ಪ್ರಕಟಿಸಿಲ್ಲ.

No Comments

Leave A Comment